ಕಾಸರಗೋಡು: ತಳಂಗರೆಯಲ್ಲಿ ಹೋಟೆಲ್ ನೌಕರನಾಗಿದ್ದ ವ್ಯಕ್ತಿಯನ್ನು ವಾಸ ಸ್ಥಳದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಬದರ್ ಹೋಟೆಲ್ ನೌಕರ, ತಳಿಪರಂಬ ಕಡಂಬೇರಿ ನಿವಾಸಿ ಅನೀಶ್ (58) ಮೃತಪಟ್ಟವರು. 10 ವರ್ಷದಿಂದ ಈ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಹೋಟೆಲ್ ಕಟ್ಟಡದ ಮೇಲಿನ ಅಂತಸ್ತಿನಲ್ಲಿ ವಾಸ ಮಾಡುತ್ತಿದ್ದರು. ಪ್ರತೀ ದಿನ ಮುಂಜಾನೆ ೪ ಗಂಟೆಗೆ ಅನೀಶ್ ಹೋಟೆಲ್ ತೆರೆಯುತ್ತಿದ್ದರು. ಇಂದು ವಿಳಂಬವಾದರೂ ಹೋಟೆಲ್ ತೆರೆಯದ ಹಿನ್ನೆಲೆಯಲ್ಲಿ ಮಾಲಕ ವಾಸಸ್ಥಳಕ್ಕೆ ಹೋಗಿ ನೋಡಿದಾಗ ಅನೀಶ್ ಚಲನೆಯಿಲ್ಲದೆ ಮಲಗಿರುವುದನ್ನು ಕಂಡಿದ್ದಾರೆ. ಕೂಡಲೇ ಮಾಲಿಕ್ ದೀನಾರ್ ಆಸ್ಪತ್ರೆಗೆ ತಲುಪಿಸಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ನಿದ್ದೆಯಲ್ಲಿ ಸಂಭವಿಸಿದ ಹೃದಯಾಘಾತ ಸಾವಿಗೆ ಕಾರಣವೆಂದು ಶಂಕಿಸಲಾಗಿದೆ. ಮೃತದೇಹವನ್ನು ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ಯಲಾಗಿದೆ.
ಮೃತರು ಪತ್ನಿ ಯಮುನ, ಮಕ್ಕಳಾದ ಹರಿಕೃಷ್ಣನ್, ಗೋಪಿಕೃಷ್ಣನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.







