ಉಪ್ಪಳ: ಉಪ್ಪಳ ಕ್ಯಾನ್ಸರ್ ಕೇರ್ ಫೌಂಡೇಶನ್‌ನ ಚೆಯರ್ ಮೆನ್ ಹಾಗೂ ಮುಂಬೈಯಲ್ಲಿ ಹೋಟೆಲ್ ವ್ಯಾಪಾರಿಯಾಗಿದ್ದ ಪ್ರಮುಖ ಜೀವ ಕಾರುಣ್ಯ ಕಾರ್ಯ ಕರ್ತನಾದ ಉಪ್ಪಳ ಬಪ್ಪಾಯಿತೊಟ್ಟಿ ನಿವಾಸಿ ಮುಹಮ್ಮದ್ ಮೊಯ್ದೀನ್ ಹಿಂದುಸ್ಥಾನ್ (75) ನಿಧನ ಹೊಂದಿದರು.
ಬಾಂಬೆ ಕೇರಳ ಮುಸ್ಲಿಂ ಜಮಾ ಯತ್ ಮಾಜಿ ಕೌನ್ಸಿಲ್ ಸದಸ್ಯನೂ, ಮುಂಬೈಯ ಹಿಂದೂಸ್ಥಾನ್ ರೆಸ್ಟೋರೆಂಟ್‌ನ ಮಾಲಕನಾಗಿದ್ದರು. ಮೃತರು ಪತ್ನಿ ಆಸ್ಯಮ್ಮ, ಮಕ್ಕಳಾದ ನೂರ್‌ಜಹಾನ್, ಫೈರೂಸ್, ಯಾಸಿರ್, ಅಳಿಯ ಖಲೀಲ್ ಕಲ್ಲಟ್ರ, ಸಹೋದರ ಸಿದ್ದಿಕ್, ಸಹೋದರಿಯರಾದ ಆಯಿಶ, ಬೀಫಾತಿಮ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






