ಮನೆಗೆ ಬೆಂಕಿಗಾಹುತಿ: ಲಕ್ಷಾಂತರ ರೂ.ಗಳ ನಷ್ಟ

ಪೆರ್ಲ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಬೆಂಕಿ ತಗಲಿ ಲಕ್ಷಾಂತರ ರೂ.ಗಳ ನಾಶನಷ್ಟ ಉಂಟಾದ ಘಟನೆ ಬೆದ್ರಂಪಳ್ಳ ನಡುಬಯಲ್‌ನಲ್ಲಿ ನಿನ್ನೆ ನಡೆದಿದೆ.

ನಡುಬಯಲಿನ ರಮೇಶ್ಚಂದ್ರ ಎಂಬವರ ಮನೆಗೆ ನಿನ್ನೆ ಸಂಜೆ ಬೆಂಕಿ ತಗಲಿದೆ. ಇದರಿಂದ ಮನೆಯೊಳಗಿದ್ದ ಫ್ರಿಡ್ಜ್, ಟಿವಿ, ಪೀಠೋಪಕರಣಗಳು, ಕಪಾಟುಗಳು, ದಾಖಲೆಪತ್ರಗಳು  ಮೊದಲಾದವುಗಳು ಪೂರ್ಣವಾಗಿ ಉರಿದು ನಾಶಗೊಂಡಿದೆ.  ಮನೆಗೆ ಬೆಂಕಿ ತಗಲುವ ವೇಳೆ ಅಲ್ಲಿ ಯಾರೂ ಇರಲಿಲ್ಲ. ಮನೆಯವರು  ಮಡಿಕೇರಿಯ ದೇವಸ್ಥಾನವೊಂದಕ್ಕೆ  ಹೋಗಿದ್ದ ವೇಳೆ ಮನೆಗೆ ಬೆಂಕಿ ತಗಲಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗಲಿರಬ ಹುದೆಂದು ಅಂದಾಜಿಸಲಾಗಿದೆ. ಹೆಂಚು ಹಾಸಿದ  ಮನೆಯಿಂದ ಬೆಂಕಿ, ಹೊಗೆ  ಕಾಣಿಸಿಕೊಂಡಿದ್ದು, ಈ ಬಗ್ಗೆ ಸ್ಥಳೀಯರು ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದರು.  ಕೂಡಲೇ ಗ್ರೇಡ್ ಸ್ಟೇಶನ್ ಆಫೀಸರ್ ವಿನೋದ್ ಕುಮಾರ್, ಅಸಿಸ್ಟೆಂಟ್ ಸ್ಟೇಶನ್ ಆಫೀಸರ್ ಸೂರಜ್ ಎಂ ನೇತೃತ್ವದ ಕಾಸರಗೋಡು ಅಗ್ನಿಶಾಮಕದಳ ತಲುಪಿ ಬೆಂಕಿ ನಂದಿಸಿದೆ. ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ಗೋಕುಲ್ ಕೃಷ್ಣ, ವಿ.ಎಸ್. ಜಿತು ಥೋಮಸ್, ವೈಶಾಖ್ ಎಂ.ಎ, ಅರುಣ್ ಕುಮಾರ್ ಎಂ.ಎಂ, ವೈಶಾಖ್, ಪಾರ್ಥಸಾರಥಿ,ಸಂತು, ಅರುಣ ಪಿ. ನಾಯರ್, ಹೋಂಗಾ ರ್ಡ್‌ಗಳಾದ ರಾಜೇಂದ್ರನ್, ಉಣ್ಣಿಕೃಷ್ಣನ್, ಚಾಲಕ ಅಜೇಶ್ ಕೆ.ಆರ್ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕದಳದಲ್ಲಿದ್ದರು.

ವಿಷಯ ತಿಳಿದು ಬದಿಯಡ್ಕ ಪೊಲೀಸರು ಹಾಗೂ ನಾಗರಿಕರು ಕೂಡಾ ಸ್ಥಳಕ್ಕೆ ತಲುಪಿದ್ದರು. ಮನೆಗೆ ಬೆಂಕಿ ತಗಲಿದ ಪರಿಣಾಮ ೨೦ ಲಕ್ಷ ರೂ.ಗಳ ನಷ್ಟ ಅಂದಾಜಿಸಲಾಗಿ ದೆಯೆಂದು ಅಗ್ನಿಶಾಮಕದಳ ತಿಳಿಸಿದೆ.

RELATED NEWS

You cannot copy contents of this page