ಗಾಳಿ ಮಳೆಗೆ ಕುಸಿದ ಮನೆ: ಒಳಗೆ ಸಿಲುಕಿಕೊಂಡ ತಾಯಿ, ಪುತ್ರಿಯ ರಕ್ಷಣೆ

ಕಾಸರಗೋಡು: ಗಾಳಿ ಹಾಗೂ ಮಳೆಗೆ   ಕರಿಂದಳ ಕಾಟಿಪೊಯಿಲ್‌ನಲ್ಲಿ ಮನೆ ಸಂಪೂರ್ಣ ಹಾನಿಯಾಗಿದೆ. ನಿದ್ರಿಸುತ್ತಿದ್ದ ತಾಯಿ ಹಾಗೂ ಮಕ್ಕಳು ಸಣ್ಣಪುಟ್ಟ ಗಾಯಗಳೊಂದಿಗೆ  ಪಾರಾಗಿದ್ದಾರೆ. ಇಂದು ಮುಂಜಾನೆ 3 ಗಂಟೆಗೆ ಮನೆ ಕುಸಿದುಬಿದ್ದಿದೆ. ಕಾಟಿಪೊಯಿಲ್‌ನ ಕೆ.ಸಿ.ಸುಂದರನ್‌ರ ಹೆಂಚು ಹಾಸಿದ ಮನೆ ಗಾಳಿಗೆ ಕುಸಿದುಬಿದ್ದಿದ್ದು ಇದರೊಳಗೆ ಸಿಲುಕಿಕೊಂಡ ಸುಂದರನ್‌ನ ಪತ್ನಿ ಮಿನಿ, ಪುತ್ರಿ ಶ್ರೀನಂದ ಎಂಬಿವರನ್ನು ನೆರೆಮನೆ ನಿವಾಸಿಗಳು ರಕ್ಷಿಸಿದರು.  ನೆರೆಮನೆ ನಿವಾಸಿಯಾದ ಮಣಿ ಯಾನೆ ರಾಧಾಕೃಷ್ಣನ್ ಕುಸಿದುಬಿದ್ದ ಮನೆಯೊಳಗೆ ನುಸುಳಿ ಸಾಹಸಿಕವಾಗಿ ಒಳಗಿದ್ದವರನ್ನು ರಕ್ಷಿಸಿದ್ದಾರೆ. ಸುಂದರನ್ ಸೆಕ್ಯುರಿಟಿ ನೌಕರನಾಗಿದ್ದು ಈವೇಳೆ ಕರ್ತವ್ಯಸ್ಥಳದಲ್ಲಿದ್ದರ. 

You cannot copy contents of this page