ಪುತ್ತಿಗೆ: ಯಾವುದೇ ಕ್ಷಣದಲ್ಲಿ ಕುಸಿದು ಬೀಳಬಹುದಾದ ಮನೆಯಲ್ಲಿ ಬಡಕುಟುಂಬವೊಂದು ವಾಸಿಸುತ್ತಿದ್ದು, ಆತಂಕ ನೆಲೆಗೊಂ ಡಿದೆ. ಪುತ್ತಿಗೆ ಪಂಚಾಯತ್ ೬ನೇ ವಾರ್ಡ್ ಪಾಡ್ಲಡ್ಕದಲ್ಲಿ ಬಡ ಕುಟುಂಬದ ಮೈಮೂನ ಎಂಬವರು ವಾಸಿಸುವ ಮನೆ ಅಪಾಯ ಭೀತಿಯೊಡ್ಡುತ್ತಿದೆ.
೧೪ ವರ್ಷಗಳ ಹಿಂದೆ ಹಳೆಯ ಹೆಂಚಿನ ಮನೆ ಹಾಗೂ ಆರು ಸೆಂಟ್ ಸ್ಥಳವನ್ನು ಮೈಮೂನ ಖರೀದಿಸಿದ್ದರು. ಹೆಂಚಿನ ಮೇಲ್ಛಾವಣಿಯಿಂದ ಮಳೆ ನೀರು ಮನೆಯೊಳಗೆ ಸೋರುತ್ತಿದೆ. ಇದರಿಂದ ಛಾವಣಿ ಮೇಲೆ ಪ್ಲಾಸ್ಟಿಕ್ ಹೊದಿಸಿ ನೀರು ಒಳಗೆ ಬೀಳುವುದನ್ನು ತಡೆಯಲಾಗಿದೆ. ಆದರೂ ಜೋರಾಗಿ ಗಾಳಿ ಬೀಸಿದರೆ ಮನೆ ಕುಸಿಯುವ ಭೀತಿಯಲ್ಲಿದ್ದು, ಇದರಿಂದ ಕುಟುಂಬಕ್ಕೆ ನೆಮ್ಮದಿ ಇಲ್ಲದಂತಾಗಿದೆ.
ಪಂಚಾಯತ್‌ನಲ್ಲಿ ಲೈಫ್ ಮಿಷನ್ ವಸತಿ ಯೋಜನೆಯಲ್ಲಿ ಮೈಮೂನರ ಹೆಸರಿದೆಯೆಂದು ಹೇಳಲಾಗುತ್ತಿದೆ. ಆದರೆ ಆದ್ಯತಾ ಲಿಸ್ಟ್‌ನಲ್ಲಿ ಸೇರ್ಪಡೆಗೊಂಡಿಲ್ಲ. ಆದರೆ ಮನೆ ಮಂಜೂರಾಗುವವರೆಗೆ ಈಗಿರುವ ಮನೆಯಲ್ಲಿ ವಾಸಿಸಲು ಸಾಧ್ಯವಿಲ್ಲದಂ ತಾಗಿದೆಯೆಂದು ಕುಟುಂಬ ಹೇಳುತ್ತಿದೆ. ಮೈಮೂನ ಉದ್ಯೋಗ ಖಾತರಿ ಕಾರ್ಮಿಕೆಯಾಗಿದ್ದಾರೆ. ಇವರ ಪತಿ ಅಸೌಖ್ಯ ಬಾಧಿತರಾಗಿದ್ದು, ಇದರಿಂದ ಕೆಲವೊಮ್ಮೆ ಆಟೊ ಚಲಾಯಿಸಿ ದೈನಂದಿನ ಖರ್ಚಿಗೆ ಹಣ ಸಂಗ್ರಹಿಸುತ್ತಿದ್ದಾರೆ. ಇಬ್ಬರು ಮಕ್ಕಳು ವಿದ್ಯಾರ್ಥಿಗಳಾಗಿದ್ದಾರೆ. ಇದೇ ಸ್ಥಿತಿಯಾದರೆ ಮನೆ ನಿರ್ಮಿಸಲು ಸಾಧ್ಯವಿಲ್ಲ. ಆದ್ದರಿಂದ ಯಾರಾ ದರೂ ಸಹಾಯವೊದಗಿಸುವರೇ ಎಂದು ಕುಟುಂಬ ನಿರೀಕ್ಷೆ ವ್ಯಕ್ತಪಡಿಸುತ್ತಿದೆ. ಇದೇ ವೇಳೆ ಈ ಕುಟುಂಬದ ಸಂಕಷ್ಚ ಸ್ಥಿತಿ ಪರಿಹರಿಸಲು ಅಗತ್ಯದ ಕ್ರಮ ಕೈಗೊಳ್ಳಲಾಗುವುದೆಂದು ವಾರ್ಡ್ ಜನಪ್ರತಿನಿಧಿಯೂ ಪಂಚಾಯತ್ ಉಪಾಧ್ಯಕ್ಷೆಯೂ ಆಗಿರುವ ಜಯಂತಿ ತಿಳಿಸುತ್ತಿದ್ದಾರೆ.