ಕಾಸರಗೋಡು: 48ರ ಹರೆಯದ ಗೃಹಿಣಿಗೆ ಲೈಂಗಿಕ ಕಿರುಕುಳ ನೀಡಲಾಯಿತೆಂಬ ಆರೋಪದ ಹಿನ್ನೆಲೆಯಲ್ಲಿ ಕೊನೆಗೂ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಸಿಪಿಎಂ ಮಾಜಿ ಕುಂಬಳೆ ಏರಿಯಾ ಕಾರ್ಯದರ್ಶಿ, ಪ್ರಸ್ತುತ ಎಣ್ಮಕಜೆ ಪಂಚಾಯತ್ ಸದಸ್ಯನಾದ ಇಚ್ಲಂಪಾಡಿ ಶಾಲೆ ಅಧ್ಯಾಪಕ ಎಸ್. ಸುಧಾಕರನ ವಿರುದ್ಧ ಕಾಸರಗೋಡು ಮಹಿಳಾ ಪೊಲೀಸರು ಅತ್ಯಾಚಾರ ಕೇಸು ದಾಖಲಿಸಿಕೊಂಡಿದ್ದಾರೆ. ಡಿಜಿಪಿಯವರ ನಿರ್ದೇಶ ಪ್ರಕಾರ ಕೇಸು ದಾಖಲಿಸಿ ಕೊಂಡಿರುವುದಾಗಿ ಸೂಚನೆಯಿದೆ. ಕಿರುಕುಳಕ್ಕೆ ಸಂಬಂಧಿಸಿ ಗೃಹಿಣಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಹಾಗೂ ಡಿಜಿಪಿಗೆ ದೂರು ನೀಡಿದ್ದರು.
ಆರೋಪದ ಹಿನ್ನೆಲೆಯಲ್ಲಿ ಸುಧಾಕರನನ್ನು ಪಕ್ಷದಿಂದ ಅಮಾನತುಮಾಡಿದ್ದು, ತನಿಖೆಗಾಗಿ ಮೂವರು ಸದಸ್ಯರ ಸಮಿತಿಯನ್ನು ನೇಮಿಸಲಾಗಿತ್ತು. ಈ ಸಮಿತಿಯ ತನಿಖೆ ಮುಂದುವರಿಯುತ್ತಿರುವಂತೆ ಸುಧಾಕರನ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. 1995ರಿಂದಲೇ ಕಿರುಕುಳ ನೀಡುತ್ತಿದ್ದುದಾಗಿ ಗೃಹಿಣಿ ದೂರಿನಲ್ಲಿ ತಿಳಿಸಿದ್ದರು. ತನಗೆ ಹಾಗೂ ಕುಟುಂಬಕ್ಕೆ ಕೊಲೆ ಬೆದರಿಕೆ ಇರುವುದಾಗಿಯೂ ದೂರಿನಲ್ಲಿ ತಿಳಿಸಲಾಗಿತ್ತು.






