ಕಲ್ಲಿಕೋಟೆ: ಕ್ಷೇತ್ರ ಅಂಗಳ ಗುಡಿಸುತ್ತಿದ್ದಾಗ ಮರದ ರೆಂಬೆ ಮುರಿದು ತಲೆಗೆ ಬಿದ್ದು ಗೃಹಿಣಿ ಮೃತಪಟ್ಟ ಘಟನೆ ನಡೆದಿದೆ. ಕಲ್ಲಿಕೋಟೆ ಪನ್ನಿಯಂಕರ ನಿವಾಸಿ ಶಾಂತ ಎಂಬವರು ಮೃತ ದುರ್ದೈವಿ. ಮಾಯಂಪಳ್ಳಿ ಶ್ರೀದೇವಿ ಕ್ಷೇತ್ರ ಸಮೀಪ ಇಂದು ಬೆಳಿಗ್ಗೆ ಘಟನೆ ನಡೆದಿದೆ. ಇದರಿಂದ ಗಂಭೀರ ಗಾಯಗೊಂಡ ಶಾಂತರನ್ನು ಆಸ್ಪತ್ರೆಗೆ ತಲುಪಿಸಿ ದರೂ ಜೀವ ರಕ್ಷಿಸಲಾಗಲಿಲ್ಲ.
