ಬಿಪಿ ಪರೀಕ್ಷಿಸಲು ನಿರಾಕರಿಸಿದ ಆರೋಪ: ಬದಿಯಡ್ಕ ಸಾಮೂಹಿಕ ಆರೋಗ್ಯ ಕೇಂದ್ರದ ವೈದ್ಯೆ ವಿರುದ್ಧ ಕ್ರಮ ಕೈಗೊಳ್ಳಲು ಮಾನವ ಹಕ್ಕು ಆಯೋಗ ನಿರ್ದೇಶ

ಬದಿಯಡ್ಕ: ಬದಿಯಡ್ಕ ಸಾಮೂಹಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ತಲುಪಿದ ರೋಗಿಯ ರಕ್ತದೊತ್ತಡ ಪರೀಕ್ಷಿಸಲು ನಿರಾಕರಿಸಿದ ವೈದ್ಯೆ ವಿರುದ್ಧ ಇಲಾಖೆ ಮಟ್ಟದ ಕ್ರಮ ಕೈಗೊಳ್ಳಬೇಕೆಂದು ಮಾನವಹಕ್ಕು ಆಯೋಗ ನಿರ್ದೇಶಿಸಿದೆ. ಕೈಗೊಂಡ ಕ್ರಮಗಳನ್ನು ೨ ತಿಂಗಳೊಳಗೆ ಕಾಸರಗೋಡು ಡಿಎಂಒ ಲಿಖಿತವಾಗಿ ತಿಳಿಸಬೇಕೆಂದೂ ಆಯೋಗದ ಜ್ಯುಡೀಶ್ಯಲ್ ಸದಸ್ಯ ಕೆ. ಬೈಜುನಾಥ್ ನಿರ್ದೇಶದಲ್ಲಿ ತಿಳಿಸಿದ್ದಾರೆ.

೨೦೨೧ ಸೆಪ್ಟಂಬರ್ ೨೯ರಂದು  ಆರೋಪಕ್ಕೆಡೆಯಾದ ಘಟನೆ ನಡೆದಿದೆ. ತಾನು ರಕ್ತದೊತ್ತಡಕ್ಕೆ  ಔಷಧಿ ಸೇವಿಸುತ್ತಿದ್ದೇನೆಂದು ವೈದ್ಯರೊಂದಿಗೆ ತಿಳಿಸಿದ್ದು, ಈ ವೇಳೆ ಬಿಪಿ ಪರೀಕ್ಷಿಸಬೇಕಾದರೆ ಶುಕ್ರವಾರ ಬರುವಂತೆ ತಿಳಿಸಿದ್ದಾರೆಂದು ದೂರುಗಾರನಾದ ಕೆ.ವಿ. ಜೋನ್ಸನ್ ತಿಳಿಸಿದ್ದಾರೆ. ೨೦೨೧ ಸೆ. ೧ರಂದು ಡಾಕ್ಟರ್ ಬದಿಯಡ್ಕ ಸಾಮೂಹಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಆರಂಭಿಸಿರುವುದಾಗಿ ಡಿಎಂಒ ಆಯೋಗಕ್ಕೆ ತಿಳಿಸಿದ್ದಾರೆ. ದೂರುದಾತ ಒ.ಪಿಗೆ ತಲುಪಿದಾಗ ಹಲವು ಮಂದಿ ರೋಗಿಗಳಿದ್ದರು. ರಕ್ತದೊತ್ತಡ ತಪಾಸಣೆ ನಡೆಸುವ ಉಪಕರಣಕ್ಕೆ ಹಾನಿ ಉಂಟಾಗಿತ್ತು. ಇದರಿಂದ ಸ್ಟಾಫ್ ಡ್ಯೂಟಿ ಕೊಠಡಿಯಲ್ಲಿ ರಕ್ತದೊತ್ತಡ ಪರೀಕ್ಷಿಸಲು ದೂರುದಾರನೊಂದಿಗೆ ವೈದ್ಯೆ ತಿಳಿಸಿರುವುದಾಗಿಯೂ ವರದಿಯಲ್ಲಿ ತಿಳಿಸಲಾಗಿದೆ. ದೂರುದಾತ ರಕ್ತದೊತ್ತಡಕ್ಕೆ ಸಂಬಂಧಿಸಿ ಕಾಣಬಹುದಾದ ಲಕ್ಷಣಗಳು ಇರಲಿಲ್ಲ. ಆದ್ದರಿಂದ ಜೀವನಶೈಲಿ ರೋಗ ತಪಾಸಣೆಗೆ ಶುಕ್ರವಾರ ನಡೆಯುವ ಕ್ಲಿನಿಕ್‌ಗೆ ತಲುಪುವಂತೆ ತಿಳಿಸಲಾಗಿತ್ತೆಂದೂ ವರದಿಯಲ್ಲಿ ತಿಳಿಸಲಾಗಿದೆ. ಸೇವೆಯಲ್ಲಿ ಅನುಭವ ಕಡಿಮೆಯಾಗಿರುವುದೇ ವೈದ್ಯೆ ದೂರುದಾತನಲ್ಲಿ ಈ ರೀತಿ ನಿರ್ದೇಶಿಸಲು ಕಾರಣವೆಂದೂ ವರದಿಯಲ್ಲಿದೆ. ಇನ್ನು ಮುಂದೆ ಇಂತಹ ಘಟನೆ  ನಡೆಯದಂತೆ ಜಾಗ್ರತೆ ವಹಿಸುವುದಾಗಿ ವೈದ್ಯೆ ತಿಳಿಸಿರುವುದಾಗಿಯೂ ಡಿಎಂಒ ಸಲ್ಲಿಸಿದ ವರದಿಯಲ್ಲಿದೆ.

ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ತಲುಪುವ ಎಲ್ಲರಿಗೂ ರಕ್ತದೊತ್ತಡ ತಪಾಸಣೆ ನಡೆಸಬೇಕೆಂಬ ಆರೋಗ್ಯ ಇಲಾಖೆ ಡೈರೆಕ್ಟರ್‌ರ ಪತ್ರ ಎಲ್ಲಾ ಉಪ ಕೇಂದ್ರಗಳಿಗೂ ನೀಡಲಾಗಿದೆ ಎಂದೂ ಡಿಎಂಒ ತಿಳಿಸಿದ್ದಾರೆ. ಆದರೆ ತಾನು ಚಿಕಿತ್ಸೆಗೆ ತಲುಪಿದಾಗ ಒ.ಪಿಯಲ್ಲಿ ರೋಗಿಗಳ ಸಂದಣಿ ಇರಲಿಲ್ಲವೆಂದೂ ಬಿ.ಪಿ ತಪಾಸಣೆ ಉಪಕರಣಕ್ಕೆ ಹಾನಿಯುಂಟಾಗಿರಲಿ ಲ್ಲವೆಂದು ದೂರುದಾರ ತಿಳಿಸಿದ್ದಾರೆ. ವೈದ್ಯೆಯೊಂದಿಗೆ  ಸಿಟ್ಟಿಂಗ್‌ನಲ್ಲಿ ಹಾಜರಾಗಲು ನಿರ್ದೇಶಿಸಲಾಯಿತಾ ದರೂ ಶಿಕ್ಷಣದ ಕಾಲಾವಧಿಯಾದುದರಿಂದ ನೋಟೀಸ್ ಪಡೆದುಕೊಂಡಿಲ್ಲವೆಂದು ಡಿಎಂಒ ತಿಳಿಸಿದ್ದಾರೆ. ತನಿಖೆಯಲ್ಲಿ ವೈದ್ಯೆಯ ಭಾಗದಿಂದ ಲೋಪವುಂಟಾಗಿರುವುದಾಗಿ ಆಯೋಗ ಅಂದಾಜಿಸಿದೆ. ಆಸ್ಪತ್ರೆಯಲ್ಲಿ ರೋಗಿಗಳ ಸಂದಣಿ ಹಾಗೂ ವೈದ್ಯೆಗೆ ಅನುಭವ ಕಡಿಮೆಯಾಗಿರುವುದು ರೋಗಿಗಳೊಂದಿಗೆ ಸಹನೆಯೊಂದಿಗೆ ವರ್ತಿಸದಿರಲು ಕಾರಣವಾಗಿ ಪರಿಗಣಿಸಲಾಗದೆಂದು ಕೆ. ಬೈಜುನಾಥ್ ಆದೇಶದಲ್ಲಿ ತಿಳಿಸಿದ್ದಾರೆ.

RELATED NEWS

You cannot copy contents of this page