ಕೋಟಯಂ: ಅನ್ಯಸ್ತ್ರೀಯರೊಂ ದಿಗಿನ ಸಂಬಂಧವನ್ನು ಪ್ರಶ್ನಿಸಿದ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆಗೈದು ಮೃತದೇ ಹವನ್ನು ಕಂದಕಕ್ಕೆಸೆದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಾಣಕ್ಕಾರಿ ರತ್ನಗಿರಿ ಸಮೀಪ ಕಪ್ಪಣಕ್ಕುನ್ನೇಲ್ ನಿವಾಸಿ ಜೆಸಿ ಸಾಮ್ (50) ಕೊಲೆಗೀಡಾದ ಮಹಿಳೆ. ಈ ಪ್ರಕರಣಕ್ಕೆ ಸಂಬಂಧಿಸಿ ಪತಿ ಸಾಮ್ ಕೆ. ಜೋರ್ಜ್ (59)ನನ್ನು ಮೈಸೂರಿನಿಂದ ಬಂಧಿಸಲಾಗಿದೆ. ಈತನ ಜೊತೆಗಿದ್ದ ಇರಾನ್ ಪ್ರಜೆಯಾದ ಯುವತಿಯನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಸಾಮ್ ಕೆ. ಜೋರ್ಜ್‌ಗೆ ಹಲವು ಮಹಿಳೆಯರೊಂದಿಗೆ ಸಂಬಂಧವಿದೆ ಯೆಂದೂ ಅದನ್ನು ಪ್ರಶ್ನಿಸಿರುವುದೇ ಪತ್ನಿ ಯನ್ನು ಕೊಲೆಗೈಯ್ಯಲು ಕಾರಣವಾಗಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಐಟಿ ಪ್ರೊಫೆಶನಲ್ ಆಗಿರುವ ಸಾಮ್ ಕೆ. ಜೋರ್ಜ್ ಎಂ.ಜಿ. ವಿಶ್ವವಿದ್ಯಾನಿಲಯ ಕ್ಯಾಂಪಸ್‌ನಲ್ಲಿ ಟ್ರಾವಲ್ ಆಂಡ್ ಟೂರಿಸಂ ಪದವಿ ಕೋರ್ಸ್ ಕಲಿಯುತ್ತಿ ದ್ದಾನೆ. ಅಲ್ಲಿ ಕಲಿಯುತ್ತಿರುವ ಇರಾನ್ ಪ್ರಜೆ ಯಾದ ಯುವತಿ ಈತನ ಸಹಪಾಠಿಯಾಗಿದ್ದಾಳೆ. ಈತ ಈ ಯುವತಿಯೊಂದಿಗೆ ಹಲವು ಬಾರಿ ಮನೆಯಲ್ಲಿ ವಾಸಿಸಿರುವುದಾಗಿಯೂ ಹೇಳಲಾಗುತ್ತಿದೆ. ಈ ವಿಷಯಕ್ಕೆ ಸಂಬಂಧಿಸಿ ಉಂಟಾದ ಕೌಟುಂಬಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ಎರಡಂತಸ್ತಿನ ಮನೆಯಲ್ಲಿ ಸಾಮ್ ಕೆ. ಜೋರ್ಜ್ ಹಾಗೂ ಜೆಸಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರೆನ್ನಲಾಗಿದೆ. ಕಳೆದ ತಿಂಗಳ 26ರಂದು ರಾತ್ರಿ ಕಾಣಕ್ಕಾರಿಯಲ್ಲಿರುವ ಮನೆಯಲ್ಲಿ ಇವರಿಬ್ಬರ ಮಧ್ಯೆ ವಾಗ್ವಾದ ಉಂಟಾಗಿದ್ದು, ಈ ವೇಳೆ ಖಾರದ ದ್ರಾವಣವನ್ನು ಜೆಸಿಯ ಮೇಲೆ ಸಾಮ್ ಪ್ರಯೋಗಿಸಿದ್ದನು. ಅನಂತರ ಬೆಡ್‌ರೂಮ್‌ನಲ್ಲಿ ಉಸಿರುಗಟ್ಟಿಸಿ ಕೊಲೆಗೈದಿರುವುದಾಗಿ ಪ್ರಕರಣದಲ್ಲಿ ತಿಳಿಸಲಾಗಿದೆ. ಬಳಿಕ ಮೃತದೇಹವನ್ನು ಕಾರಿನ ಢಿಕ್ಕಿಯಲ್ಲಿ ತುಂಬಿಸಿ ಕೊಂಡೊಯ್ದು ಕಂದಕಕ್ಕೆಸೆಯಲಾಗಿದೆ. ಅನಂತರ ಸಾಮ್ ಮೈಸೂರಿಗೆ ಪರಾರಿಯಾಗಿದ್ದನು. ಇಡುಕ್ಕಿ ಉಡುಂಬನ್ನೂರು ಚೆಪ್ಪುಕುಳಂ ವ್ಯೂ ಪಾಯಿಂಟ್ ರಸ್ತೆಯಿಂದ 50 ಅಡಿ ಕೆಳಗೆ ಜೆಸಿಯ ಮೃತದೇಹ ಪತ್ತೆಯಾಗಿತ್ತು. ಇದರಂತೆ ಪೊಲೀಸರು ತನಿಖೆ ಆರಂಭಿಸಿದ್ದರು. ಈತನಿಗೆ ಉಳವೂರ್ ಅರಿಕ್ಕರ ಎಂಬಲ್ಲಿ 4.5 ಎಕರೆ ಭೂಮಿ ಹಾಗೂ ಗೋವಾ, ಕೋವಳದಲ್ಲಿ ಫ್ಲಾಟ್‌ಗಳಿವೆ. ಸೊತ್ತಿಗೆ ಸಂಬಂಧಿಸಿ ದಂಪತಿ ಮಧ್ಯೆ ವಿವಾದವು ಇತ್ತೆನ್ನಲಾಗಿದೆ. ಇದು ಕೂಡಾ ಕೊಲೆಗೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಾಯಿ ನಾಪತ್ತೆಯಾಗಿರುವುದಾಗಿ ತಿಳಿಸಿ ಮಕ್ಕಳು ನೀಡಿದ ದೂರಿನಂತೆ ಕುರವಿಲಂಗಾಡ್ ಪೊಲೀಸರು ನಡೆಸಿದ ತನಿಖೆ ವೇಳೆ ಆರೋಪಿ ಸೆರೆಗೀಡಾಗಿದ್ದಾನೆ.







