ಕಾಸರಗೋಡು: ಶಾಲಾಕಾಲೇಜು ಗಳಲ್ಲಿ ನಡೆಯುತ್ತ್ತಿರುವ ರ‍್ಯಾಗಿಂಗ್ ಪ್ರಕರಣಗಳು ಸಾಬೀತುಗೊಂಡಲ್ಲಿ ಅಂತಹ ಪ್ರಕರಣಗಳ ಆರೋಪಿಗಳಾದ ವಿದ್ಯಾರ್ಥಿಗಳಿಗೆ ಎgಡು ವರ್ಷ ಸಜೆ ಲಭಿಸಲಿದೆ ಮಾತ್ರವಲ್ಲ 10,000 ರೂ. ಜುಲ್ಮಾನೆ ಪಾವತಿಸಬೇಕಾಗಿ ಬರಲಿದೆ.
ಇದು ಮಾತ್ರವಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿರುವ ರ‍್ಯಾಗಿಂಗ್ ಆರೋಪದ ಕುರಿತಾಗಿ ದೂರುಗಳಿದ್ದಲ್ಲಿ ಅದನ್ನು ಬಚ್ಚಿಡಲು ಯತ್ನಿಸಿದಲ್ಲ್ಲಿ ಅಂತಹ ಶಿಕ್ಷಣ ಸಂಸ್ಥೆಗಳು ರ‍್ಯಾಗಿಂಗ್‌ಗೆ ಸಹಾಯ ಮಾಡಿರುವುದಾಗಿ ಪರಿಗಣಿಸಿ ಅವುಗಳನ್ನು ಅಂತಹ ಪ್ರಕರಣಗಳಲ್ಲಿ ಆರೋಪಿ ಸ್ಥಾನದಲ್ಲಿ ಸೇರ್ಪಡೆಗೊಳಿಸಲಾಗುವುದು.
ಶಿಕ್ಷಣ ಸಂಸ್ಥೆಗಳಲ್ಲಿ ರ‍್ಯಾಗಿಂಗ್ ನಡೆದಲ್ಲಿ ಆ ಕುರಿತಾದ ದೂರುಗಳನ್ನು ಆಂಟಿ ರ‍್ಯಾಗಿಂಗ್ ಹೆಲ್ಪ್ ಲೈನ್‌ನಂಬ್ರರ 1800-180-5522 ಎಂಬ ಟೋಲ್ ಫೀ ನಂಬಕ್ಕೆ ಕರೆದು ನೀಡಬಹುದು ಅಥವಾ ವೆಬ್ ಸೈಟ್ ಮೂಲಕವೂ ನೀಡಬಹದೆಂದು ಪೊಲೀಸರು ತಿಳಿಸಿದ್ದಾರೆ.
ಇತರ ಜಿಲ್ಲೆಗಳಲ್ಲಿರುವಂತೆ ಇತ್ತೀಚೆಗೆ ಕಾಸರಗೋಡು ಜಿಲ್ಲೆಯ ಹಲವು ಶಿಕ್ಷಣ ಸಂಸ್ಥೆಗಳಲ್ಲ್ಲೂ ಸೀನಿಯರ್ ವಿದ್ಯಾರ್ಥಿಗಳು ಸೇರಿ ಜ್ಯೂನಿಯರ್ ವಿದ್ಯಾರ್ಥಿ ಗಳನ್ನು ರ‍್ಯಾಗಿಂಗ್ ಗೊಳಪಡಿಸುವ ದೂರುಗಳು ಈಗ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಅದರ ವಿರುದ್ಧ ಪೊಲೀಸರು ಬಿಗಿ ಕ್ರಮ ಆರಂಭಿಸಿದ್ದಾರೆ.