ವರ್ಕಾಡಿ: ವರ್ಕಾಡಿ ಗ್ರಾಮ ಪಂಚಾಯತ್ ಕುಟುಂಬ ಆರೋಗ್ಯ ಕೇಂದ್ರದಲ್ಲಿ ಅಗತ್ಯದಷ್ಟು ವೈದ್ಯರು ಹಾಗೂ ಸಿಬ್ಬಂದಿಗಳು ಇಲ್ಲದೆ ಹಲವು ತಿಂಗಳುಗಳಿAದ ಕಾರ್ಯ ನಿರ್ವಹಿಸುತ್ತಿದ್ದು, ಸಿಪಿಎಂ ಮತ್ತು ಬಿಜೆಪಿ ನೇತೃತ್ವದ ಆಡಳಿತ ಸಮಿತಿ ಹಾಗೂ ಆರೋಗ್ಯ ಇಲಾಖೆ ಕುಟುಂಬ ಆರೋಗ್ಯ ಕೇಂದ್ರ ವನ್ನು ನಿರ್ಲಕ್ಷಿಸುತ್ತಿದೆ ಎಂದು ಮುಸ್ಲಿಂ ಲೀಗ್ ವರ್ಕಾಡಿ ಪಂಚಾಯತ್ ಸಭೆ ಆರೋಪಿಸಿದೆ. ಮೂರು ವೈದ್ಯರು ಬೇಕಾದಲ್ಲಿ ಪ್ರಸ್ತುತ ಒಬ್ಬರು ವೈದ್ಯ ಮಾತ್ರ ಇದ್ದಾರೆ. ನಾಲ್ಕು ಸ್ಟಾಫ್ ನರ್ಸ್ಗಳು ಬೇಕಾದಲ್ಲಿ ಇಬ್ಬರು ಮಾತ್ರ. ಎರಡು ಲ್ಯಾಬ್ ಟೆಕ್ನಿಷಿಯನ್ಗಳು ಬೇಕಾದರೆ ಒಬ್ಬರೂ ಇಲ್ಲ, ಲ್ಯಾಬ್ ಬಂದ್ ಆಗಿದೆ. ಇಬ್ಬರು ಫಾರ್ಮಸಿಸ್ಟ್ಗಳು ಬೇಕಾದರೆ ಒಬ್ಬರು ಮಾತ್ರ ಇದ್ದಾರೆ. ದಿನಕ್ಕೆ 250ರಿಂದ 350ರವರೆಗೆ ರೋಗಿಗಳು ಚಿಕಿತ್ಸೆಗಾಗಿ ಬರುತ್ತಿದ್ದಾರೆ.
ಗಡಿಭಾಗದಲ್ಲಿರುವ ವರ್ಕಾಡಿಯಲ್ಲಿ ಇನ್ನೊಂದು ಆರೋಗ್ಯ ಕೇಂದ್ರವಿಲ್ಲದ ಕಾರಣದಿಂ ದಾಗಿ ಈ ಪ್ರದೇಶದ ಸಾಮಾನ್ಯ ಜನರು ವರ್ಕಾಡಿ ಧರ್ಮನಗರದಲ್ಲಿರುವ ಕುಟುಂಬ ಆರೋಗ್ಯ ಕೇಂದ್ರವನ್ನು ಅವಲಂಬಿಸುತ್ತಿದ್ದಾರೆ. ಬೆಳಿಗ್ಗೆ 11:30 ನಂತರ ಓ.ಪಿ. ಟಿಕೆಟ್ ನೀಡುವುದಿಲ್ಲ, ಮಧ್ಯಾಹ್ನ ಓ.ಪಿ. ಇಲ್ಲ, ರಜೆ ದಿನಗಳಲ್ಲಿ ಕಾರ್ಯನಿರ್ವಹಣೆ ಇಲ್ಲ. ಹಲವು ಬಾರಿ ಬೇಡಿಕೆ ಇಟ್ಟಿದ್ದರೂ ಎಲ್.ಡಿ.ಎಫ್ ಆಡಳಿತದಲ್ಲಿರುವ ಪಂಚಾಯತ್ ಆರೋಗ್ಯ ಇಲಾಖೆಯನ್ನು ಸಂಪರ್ಕಿಸಲು ಪ್ರಯತ್ನಿಸದಿರುವುದು ಖಂಡನೀಯವಾಗಿದೆ ಎಂದು ಸಭೆಯಲ್ಲಿ ಅಭಿಪ್ರಾಯವ್ಯಕ್ತವಾಯಿತು. ತಕ್ಷಣ ಈ ಸಮಸ್ಯೆಯನ್ನು ಪರಿಹರಿಸದಿದ್ದರೆ ತೀವ್ರ ಹೋರಾಟಕ್ಕೆ ಮುಸ್ಲಿಂ ಲೀಗ್ ನೇತೃತ್ವ ನೀಡುವುದಾಗಿ ತಿಳಿಸಲಾಯಿತು. ವೈದ್ಯರು ಮತ್ತು ಇತರ ಸಿಬ್ಬಂದಿಗಳನ್ನು ನೇಮಕ ಮಾಡಬೇಕೆಂದು ಬೇಡಿಕೆ ಇಟ್ಟು ಮಂಜೇಶ್ವರ ಶಾಸಕರಿಗೂ ಆರೋಗ್ಯ ಇಲಾಖೆಯ ಮಂತ್ರಿಗೂ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು. ಕೆ. ಮುಹಮ್ಮದ್ ಪಾವೂರ್ ಅಧ್ಯಕ್ಷತೆ ವಹಿಸಿದರು. ಅಬ್ದುಲ್ ಮಜೀದ್ ಬಿ.ಎ, ಮೂಸ ಹಾಜಿ ತೊಕ್ಕೆ, ವಿ.ಎಸ್. ಮುಹಮ್ಮದ್ ಧರ್ಮನಗರ, ಹಾಜಿ ಎ.ಕೆ. ಉಮ್ಮರ್ ಅಬ್ಬ ಆನೇಕಲ್, ಬಾವ ಹಾಜಿ ಸೂಪಿಗುರಿ, ಮೂಸ ಕೆದುಂಬಾಡಿ, ಅಹ್ಮದ್ ಕುಂಜಿ ಕಜೆ, ಇಬ್ರಾಹಿಂ ಕಜೆ, ಸಿದ್ದೀಕ್ ಬದಿಯಾರ್, ಇಬ್ರಾಹಿಂ ಧರ್ಮನಗರ ಮುಂತಾದವರು ಭಾಗವಹಿಸಿದರು.