ಐಎಚ್‌ಆರ್‌ಡಿ ಕುಂಬಳೆ: 4ನೇ ಬಾರಿ ಎಬಿವಿಪಿ ಗೆಲುವು

ಕುಂಬಳೆ: ಕಾಲೇಜ್ ಆಫ್ ಅಪ್ಲೈಡ್ ಸಯನ್ಸ್ ಮಂಜೇಶ್ವರ, ಕುಂಬಳೆ ಐಎಚ್ ಆರ್‌ಡಿ ಕಾಲೇಜು ಯೂನಿಯನ್ ಚುನಾವಣೆಯಲ್ಲಿ ಎಬಿವಿಪಿಯ ಅಭ್ಯರ್ಥಿಗಳು ಸ್ಪರ್ಧಿಸಿದ 6 ಮೇಜರ್, 5 ಮೈನರ್ ಸೀಟಿನಲ್ಲಿ ವಿಜಯಿಸಿದ್ದು, ನಾಲ್ಕನೇ ಬಾರಿ ಯೂನಿಯನ್ ಪಡೆಯುವಲ್ಲಿ ಎಬಿವಿಪಿ ಸಫಲವಾಗಿದೆ. ಎಬಿವಿಪಿಯ ಯೂನಿಯನ್ ಅಧ್ಯಕ್ಷೆ ಸ್ಥಾನದಲ್ಲಿ ಸ್ಪರ್ಧಿಸಿದ ಮನೀಶಾ ಕೆ, ಉಪಾಧ್ಯಕ್ಷೆ ಸಂಚಿತ ಕೆ. ಎಸ್., ಸಹ ಕಾರ್ಯದರ್ಶಿ ಲೀಲಾ, ಯುಯುಸಿ ರಾಜೇಶ್, ಸ್ಪೋರ್ಟ್ಸ್ ಕ್ಯಾಪ್ಟನ್ ನಿಶಾಂತ್, ಮ್ಯಾಗಜಿನ್ ಎಡಿಟರ್ ಶರತ್ ಕುಮಾರ್ ವಿಜಯಿಸಿದ್ದು, ಎಸ್‌ಎಫ್‌ಐಗೆ ಎರಡು ಮೇಜರ್ ಸೀಟು ಲಭಿಸಿದೆ.
ಮೈನರ್ ಸ್ಥಾನದಲ್ಲಿ ಸ್ಪರ್ಧಿಸಿದ ಎಬಿವಿಪಿಯ ಕಾಮರ್ಸ್ ಅಸೋಸಿ ಯೇಷನ್ ಕಾರ್ಯದರ್ಶಿ ಹರ್ಷಿಣಿ ಎಸ್., ಬಿ ಎ. ಅಸೋಸಿಯೇಷನ್ ಕಾರ್ಯದರ್ಶಿ ಶ್ರೀಜಿತಾ ಪಿ.ಜಿ., ಪ್ರಥಮ ವರ್ಷ ಪ್ರತಿನಿಧಿ ಮನೀಶ್ ರಾಜ್, ಎರಡನೇ ವರ್ಷ ಪ್ರತಿನಿಧಿ ಅಖಿನೇಶ್ ಭಾಸ್ಕರನ್, ಪೀಜಿ ಪ್ರತಿನಿಧಿ ಉಷಾ ಕುಮಾರಿ ಬಿ. ಜಯ ಗಳಿಸಿದ್ದು, ಎಂ.ಎಸ್.ಎಫ್.ನ ಎರಡು ಅಭ್ಯರ್ಥಿಗಳು ವಿಜಯಿಸಿದ್ದಾರೆ.

You cannot copy contents of this page