ಕುಂಬಳೆ: ಮಂಜೇಶ್ವರ ತಾಲೂಕಿನ ವಿವಿಧ ಭಾಗಗಳಲ್ಲಿ ಅಕ್ರಮ ಜಲ್ಲಿಕಲ್ಲು ಗಣಿಗಾರಿಕೆ ಮತ್ತು ಮಣ್ಣು ಅಗೆಯುವಿಕೆ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳು ಸಿದ್ಧರಾಗುತ್ತಿಲ್ಲ ಎಂದು ಮಾನವ ಹಕ್ಕು ಕಾರ್ಯಕರ್ತ ಎನ್. ಕೇಶವ ನಾಯಕ್ ನಾಯ್ಕಾಪು ಕುಂ ಬಳೆಯಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಆರೋಪಿಸಿದರು.
ಕಳೆದ ಕೆಲವು ವರ್ಷಗಳಿಂದ, ಜಿಲ್ಲೆಯ ನೈಸರ್ಗಿಕ ಸಂಪನ್ಮೂಲ ಗಳನ್ನು ಅಂತರ್ ರಾಜ್ಯ ಮಾಫಿ ಯಾ ಗಳು ಕಳ್ಳಸಾಗಣೆ ಮಾಡುತ್ತಿವೆ. ಅಧಿ ಕಾರಿಗಳೇ ಮಾಫಿಯಾ ತಂಡಗಳೊA ದಿಗೆ ಬೆಂಬಲಿಸುವ ಕೆಲಸ ಮಾಡುತ್ತಿದೆ ಎಂದವರು ಆರೋಪಿಸಿದರು.
ಮೀಂಜ ಪಂ. ಕೋಳ್ಯೂರು ಪೊಳ್ಳಕಜೆಯ ಸರಕಾರಿ ಸ್ವಾಮ್ಯದ ಭೂಮಿಯಲ್ಲಿರುವ ಕ್ವಾರೆಯಿಂದ ಜಲ್ಲಿಕಲ್ಲುಗಳನ್ನು ಕರ್ನಾಟಕಕ್ಕೆ ಕಳ್ಳಸಾಗಾಟ ಮಾಡಲಾಗುತ್ತಿದೆ. ಕುಂಬಳೆ ಬಳಿಯ ಅನಂತಪುರ, ಕೊಯಿಪ್ಪಾಡಿ ಗ್ರಾಮದಲ್ಲಿಯೂ ಅಕ್ರಮ ಜಲ್ಲಿಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಪೈವಳಿಕೆಯ ಬಾಯಾರು ಸಮೀಪದ ಪಾದೆಕಲ್ಲು ಪರಿಸರದಲ್ಲಿ ನಡೆಯುತ್ತಿರುವ ಭೂ ಮಾಫಿಯಾ, ಅನಂತಪುರ ಮತ್ತು ಎಡನಾಡು ಗ್ರಾಮಗಳಲ್ಲಿ ನಡೆಯುವ ಮರದ ಕಳ್ಳಸಾಗಾಟಯ ವಿರುದ್ಧ ಬೆರಳು ಎತ್ತಲು ಅಧಿಕಾರಿಗಳು ಸಿದ್ಧರಾಗುತ್ತಿಲ್ಲ. ಈ ಘಟನೆಗೆ ಸಂಬAಧಿಸಿದAತೆ ಕರ್ನಾಟಕ ಸರಕಾರಕ್ಕೆ ಸಲ್ಲಿಸಲಾದ ದೂರಿಗೆ ಸರಿಯಾದ ಉತ್ತರಗಳು ತನಗೆ ಲಭ್ಯವಾಗಿದೆ. ಕೇಂದ್ರ ಪರಿಸರ ಸಚಿವಾಲಯಕ್ಕೂ ತಾನು ನೀಡಿದ ದೂರಿನ ಪತ್ರಕ್ಕೆ ಸಂಸದರ ಮೂಲಕ ಸೂಕ್ತ ಪರಿಶೀಲನೆಯ ಮಾರುತ್ತರ ಲಭಿಸಿದೆ. ಆದರೆ ರಾಜ್ಯ ಸರ್ಕಾರ ಉತ್ತರಿಸಲು ಈವರೆಗೂ ಸಿದ್ಧವಾಗಿಲ್ಲ. ಈ ನಿಟ್ಟಿನಲ್ಲಿ ಜನಸಾಮಾನ್ಯರ ಧ್ವನಿಯಾಗಿ, ಪರಿಸರ ಸಂರಕ್ಷಣೆ, ಭ್ರಷ್ಟಾಚಾರ ತಡೆಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹೋರಾಡುವುದಾಗಿ ಎನ್.ಕೇಶವ ನಾಯಕ್ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದ್ದಾರೆ.







