ಕಾಸರಗೋಡು: ಕಾರು ಮತ್ತು ಆಟೋ ರಿಕ್ಷಾಗಳಲ್ಲಾಗಿ ಇತ್ತೀಚೆಗೆ ಕರಂದಕ್ಕಾಡಿನಿಂದ ೧೦೮ ಲೀಟರ್ ಕರ್ನಾಟಕ ಮದ್ಯ ಹಾಗೂ ೩೪೫ ಲೀಟರ್ ಗೋವಾ ನಿರ್ಮಿತ ಮದ್ಯ ವಶಪಡಿಸಿಕೊಂಡ ವೇಳೆ ತಪ್ಪಿಸಿಕೊಂಡಿದ್ದ ಆರೋಪಿಯನ್ನು ತಲಪ್ಪಾಡಿ ದೇವಿಪುರಂ ರಸ್ತೆ ತಚ್ಚಾಣಿ ಎಂಬಲ್ಲಿಂದ ಕಾಸರಗೋಡು ಅಸಿಸ್ಟೆಂಟ್ ಎಕ್ಸೈಸ್ ಕಮಿಶನರ್ ಜನಾರ್ದನನ್ ಪಿ.ಪಿ ನೇತೃತ್ವದ ಅಬಕಾರಿ ತಂಡ ನಿನ್ನೆ ಬಂಧಿಸಿದೆ.
ಮಂಜೇಶ್ವರ ಸಮೀಪದ ಕುಂಜತ್ತೂರು ನಿವಾಸಿ ಅಣ್ಣು ಅಲಿಯಾಸ್ ಅರವಿಂದಾಕ್ಷ ಬಂಧಿತ ಆರೋಪಿ. ಬಂಧಿತನನ್ನು ನಂತರ ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹಾಜರುಪಡಿಸಿ ನಂತರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.
ಈತನನ್ನು ಬಂಧಿಸಿದ ಅಬಕಾರಿ ತಂಡದಲ್ಲಿ ಪ್ರಿವೆಂಟೀವ್ ಆಫೀಸರ್ ಗ್ರೇಡ್ ಅಜೀಶ್ ಸಿ, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಮಂಜುನಾಥನ್ ವಿ, ಮೋಹನ್ ಕುಮಾರ್ ಎನ್, ಶೈಲೇಶ್ ಕುಮಾರ್, ಚಾಲಕ ಮಹೇಶ್, ಕೆಮು ತಂಡದ ಎಕ್ಸೈಸ್ ಇನ್‌ಸ್ಪೆಕ್ಟರ್ ಸತೀಶ್ ಕುಮಾರ್ ಸಿ, ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್(ಗ್ರೇಡ್) ಸಂತೋಷ್ ಕುಮಾರ್, ಪ್ರಿವೆಂಟೀವ್‌ಆಫೀಸರ್ (ಗ್ರೇಡ್) ಪ್ರಜಿತ್ ಕುಮಾರ್ ಕೆ.ವಿ, ಸಿವಿಲ್‌ಎಕ್ಸೈಸ್ ಆಫೀಸರ್ ವಿಷ್ಣು ಟಿ ಎಂಬವರು ಒಳಗೊಂಡಿದ್ದರು.
ಹೊಸದುರ್ಗದಲ್ಲಿ ಪತ್ತೆಹಚ್ಚಿದ ಸ್ಪಿರಿಟ್ ಸಾಗಾಟ ಪ್ರಕರಣವೊಂದಕ್ಕೆ ಸಂಬಂಧಿಸಿ ಬಂಧಿತ ಆರೋಪಿ ಈ ಹಿಂದೆ ಶಿಕ್ಷೆಗೂ ಒಳಗಾಗಿದ್ದನೆಂದು, ಮಾತ್ರವಲ್ಲ ಇತರ ಹಲವು ಅಬಕಾರಿ ಪ್ರಕರಣಗಳಲ್ಲೂ ಈತ ಆರೋಪಿಯಾಗಿರುವುದಾಗಿ ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.







