ಪೈವಳಿಕೆ: ಹಲವು ವರ್ಷಗಳಿಂದ ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದ ಬಿಜೆಪಿ ಕಾರ್ಯಕರ್ತ ನಿಧನ ಹೊಂದಿದರು. ಪೈವಳಿಕೆ ಬಾಯಾರು ದಳಿಕುಕ್ಕು ನಿವಾಸಿ ನಾರಾಯಣ ಪಾಟಾಳಿ- ರತ್ನಾವತಿ ದಂಪತಿ ಪುತ್ರ ವಿನೋದ್‌ರಾಜ್ (36) ನಿಧನ ಹೊಂದಿದರು. ನಿನ್ನೆ ಮಂಗಳೂರು ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು. ಸಂಘ ಪರಿವಾರದ ಸಕ್ರಿಯ ಕಾರ್ಯ ಕರ್ತರಾಗಿದ್ದ ವಿನೋದ್‌ರಾಜ್‌ರಿಗೆ ಕೆಲವು ವರ್ಷದ ಹಿಂದೆ ಅಸೌಖ್ಯ ತಗಲಿತ್ತು. ಇವರ ಚಿಕಿತ್ಸೆಗಾಗಿ ಸಂಘ ಪರಿವಾರದ ನೇತೃತ್ವದಲ್ಲಿ ಸಮಿತಿ ರಚಿಸಿ ಧನ ಸಂಗ್ರಹ ನಡೆಸಲಾಗಿತ್ತು. ಶಸ್ತ್ರಚಿಕಿತ್ಸೆ ನಡೆಸಲು ಪ್ರಯತ್ನ ನಡೆದಿತ್ತು. ಈ ಮಧ್ಯೆ ನಿನ್ನೆ ಅವರು ನಿಧನ ಹೊಂದಿದ್ದಾರೆ.
ನಿಧನಕ್ಕೆ ಬಿಜೆಪಿ ಪೈವಳಿಕೆ ಪಂಚಾಯತ್ ಸಮಿತಿ, ಜಿಲ್ಲಾ ಕಾರ್ಯದರ್ಶಿ ಮಣಿಕಂಠ ರೈ ಸಹಿತ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ.