ಮಂಗಲ್ಪಾಡಿ: ಪ್ರತಾಪನಗರ ನಿವಾಸಿ ಮೋಹಿನಿ (48) ನಿಧನ ಹೊಂದಿದರು. ಅಲ್ಪ ಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಇವರಿಗೆ ನಿನ್ನೆ ಬೆಳಿಗ್ಗೆ ಮನೆಂiiಲ್ಲಿ ಅಸೌಖ್ಯ ಉಲ್ಭಣಗೊಂಡಿದ್ದು, ಮಂಗಲ್ಪಾಡಿ ಆಸ್ಪತ್ರೆಗೆ ಸಾಗಿಸುವ ಮಧ್ಯೆ ನಿಧನ ಹೊಂದಿದ್ದಾರೆ. ಅವಿವಾಹಿತರಾದ ಇವರು ದಿವಂಗತರಾದ ಜಾನಕಿ-ಕುಟ್ಟಿ ಮೇಸ್ತ್ರಿ ದಂಪತಿ ಪುತ್ರಿಯಾಗಿದ್ದಾರೆ. ಸಹೋದರಿ ಸುಹಾಸಿನಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿ ದ್ದಾರೆ. ಸಹೋದರಿಯರಾದ ಬೇಬಿ, ಲಲಿತಾ ಈ ಹಿಂದೆ ನಿಧನರಾಗಿದ್ದಾರೆ.







