ಮಂಗಲ್ಪಾಡಿ: ಪ್ರತಾಪನಗರ ಸಮೀಪದ ತಿಂಬರ ನಿವಾಸಿ ಕೈಕಂಬದಲ್ಲಿ ವ್ಯಾಪಾರಿಯಾಗಿರುವ ದುಗ್ಗಪ್ಪ ಟಿ. ಶೆಟ್ಟಿಯವರ ಪತ್ನಿ ಸುಜಾತ ಶೆಟ್ಟಿ (45) ನಿಧನ ಹೊಂದಿದರು. ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. ಇಂದು ಬೆಳಿಗ್ಗೆ ಮಂಗಳೂರು ಆಸ್ಪತ್ರೆಯಲ್ಲಿ ನಿಧನ ಸಂಭವಿಸಿದೆ. ಕೇಪು ಬೆಂಗ್ರೋಡಿ ನಿವಾಸಿ ವೆಂಕಪ್ಪ ಶೆಟ್ಟಿ- ಲೀಲಾವತಿ ಶೆಟ್ಟಿ ದಂಪತಿ ಪುತ್ರಿಯಾಗಿದ್ದಾರೆ. ಮೃತರು ಪತಿ, ಮಕ್ಕಳಾದ ಆಕರ್ಶ್ ಶೆಟ್ಟಿ, ಆದರ್ಶ್, ಸಹೋದರಿ ಸುನಿತ, ಸಹೋದರರಾದ ಶಾಂತಾರಾಮ ಶೆಟ್ಟಿ, ದಯಾನಂದ ಶೆಟ್ಟಿ, ರವೀಶ್ ಶೆಟ್ಟಿ, ವಿನೋದ್ ಶೆಟ್ಟಿ, ಚಂದ್ರಹಾಸ ಶೆಟ್ಟಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.





