ಕಾಸರಗೋಡು: ಅಸೌಖ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲ್ಪಟ್ಟ ಯುವತಿ ಮೃತಪಟ್ಟರು. ಚಂದೇರಾ ನಿವಾಸಿ ತಲೆಹೊರೆ ಕಾರ್ಮಿಕ ಎಂ. ವಿಜೇಶ್‌ರ ಪತ್ನಿ ಎಂ.ಕೆ. ದಿವ್ಯಾ (27) ಮೃತಪಟ್ಟವರು. ಎರಡು ದಿನ ಹಿಂದೆ ಅಸೌಖ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಣ್ಣೂರು ಪರಿಯಾರಂ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಅಂತ್ಯ ಸಂಭವಿಸಿದೆ. ಕೊಡಗು ನಿವಾಸಿ ಕೇಶವ-ಕನಕ ದಂಪತಿ ಪುತ್ರಿಯಾಗಿದ್ದಾರೆ. ಮೃತರು ಪತಿ, ತಂದೆ, ತಾಯಿ, ಪುತ್ರಿ ಆಶಿಕ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.







