ಕುಂಬಳೆ: ಕುಂಬಳೆ ಇಮಾಮ್ ಶಾಫಿಇ ಅಕಾಡೆಮಿಯಲ್ಲಿ ಇಮಾಮ್ ಶಾಫಿಇ ಜಲ್ಸ, ವಾರ್ಷಿಕ ಹರಕೆ, ಖತ್‌ಮುಲ್ ಖುರ್‌ಆನ್ ಸದಸ್ಸ್ ನಾಳೆ ಹಾಗೂ ಶನಿವಾರ ಬದರಿಯ ನಗರ ಇಮಾಮ್ ಶಾಫಿಇ ಕ್ಯಾಂಪಸ್‌ನಲ್ಲಿ ನಡೆಯಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ನಾಳೆ ಬೆಳಿಗ್ಗೆ 9 ಗಂಟೆಗೆ ಖಾಸಿ ಉಸ್ತಾದ್ ಮಖಾಂ ಸಿಯಾರತ್‌ಗೆ ಎಂ.ಪಿ. ಮುಹಮ್ಮದ್ ಸಅದಿ ನೇತೃತ್ವ ನೀಡುವರು.
ಅರಬಿ ಹಾಜಿ ಕುಂಬಳೆ ಧ್ವಜಾರೋಹಣಗೈಯ್ಯುವರು. ಖತ್‌ಮುಲ್ ಖುರ್‌ಆನ್ ಸದಸ್ಸ್‌ಗೆ ಮದನಿ ತಂಙಳ್ ಮೊಗ್ರಾಲ್ ನೇತೃತ್ವ ನೀಡುವರು. ಸಂಜೆ 7 ಗಂಟೆಗೆ ಕೆ.ಎಸ್. ಅಲಿ ತಂಙಳ್ ಕುಂಬೋಳ್ ಉದ್ಘಾಟಿಸುವರು. ಬಳಿಕ ಸ್ವಾಫ್ವಾನ್ ತಂಙಳ್‌ರ ನೇತೃತ್ವದಲ್ಲಿ ಮಜ್ಲಿಸುನ್ನುರ್, ಅಶ್ರಫ್ ರೆಹ್ಮಾನಿ ಚೌಕಿ ಅವರಿಂದ ಧಾರ್ಮಿಕ ಪ್ರವಚನ ನಡೆಯಲಿದೆ. ಶನಿವಾರ ಮಧ್ಯಾಹ್ನ ಪೂರ್ವ ವಿದ್ಯಾರ್ಥಿ ಸಂಗಮ, ರಾತ್ರಿ 7 ಗಂಟೆಗೆ ಖವಾಲಿ ಮಜ್ಲಿಸ್, ಮೊಯ್ದು ನಿಸಾಮಿ ಕಾಲಡಿಯವರಿಂದ ಧಾರ್ಮಿಕ ಪ್ರವಚನ, ಬಿ.ಕೆ. ಅಬ್ದುಲ್ ಖಾದರ್ ಖಾಸಿಮಿ ಅವರ ನೇತೃತ್ವದಲ್ಲಿ ಸಮಾರೋಪ ಪ್ರಾರ್ಥನೆ ನಡೆಯಲಿದೆ. ಕಾರ್ಯಕ್ರಮದ ಪ್ರಚಾರದಂಗವಾಗಿ ವಾಹನ ಪ್ರಚಾರ ಜಾಥಾ ಉಪ್ಪಳದಿಂದ ನಡೆಯಲಿದೆ ಎಂದು ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ. ಕೆ.ಎಲ್. ಅಬ್ದುಲ್ ಖಾದಿರ್ ಖಾಸಿಮಿ, ಮೂಸಾ ಹಾಜಿ ಕೋಹಿನೂರ್, ಅಲಿ ದಾರಿಮಿ, ಸುಬೈರ್ ನಿಸಾಮಿ, ಸಲಾಂ ವಾಫಿ ಅಶ್ಹರಿ, ಶಾಖಿಲ್ ಅಶಾಫಿ, ಸಾಲುದ್ ನಿಸಾಮಿ, ಮನ್ಸೂರ್ ಅಶಾಫಿ ಸುದ್ಧಿಗೋಷ್ಠಿಯಲ್ಲಿ ಭಾಗವಹಿಸಿದರು.







