ಕಾಸರಗೋಡು: ಮದ್ಯದಮಲಿನಲ್ಲಿ ಚುನಾವಣಾ ಕರ್ತವ್ಯಕ್ಕೆ ತಲುಪಿ ಮಹಿಳಾ ಪ್ರಿಸೈಂಡಿಂಗ್ ಆಫೀಸರ್‌ರೊಂ ದಿಗೆ ಅನುಚಿತವಾಗಿ ವರ್ತಿಸಿದ ಕಾಞಂಗಾಡ್ ಬೀಟಾ ಕಂಟ್ರೋಲ್ ರೂಂನ ಪೊಲೀಸ್‌ನ ವಿರುದ್ಧ ಆದೂರು ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಆದೂರು ಪೊಲೀಸ್ ಇನ್‌ಸ್ಪೆಕ್ಟರ್ ಎಂ.ವಿ. ವಿಷ್ಣುಪ್ರಸಾದ್‌ರ ದೂರಿ ನಂತೆ ಸಿಪಿಒ ಆಗಿರುವ ಸನೂಪ್ ಜೋನ್ ವಿರುದ್ಧ ಕೇಸು ದಾಖಲಿಸಲಾಗಿದೆ. ಮುಳಿಯಾರು ಪಂಚಾಯತ್‌ನ ಬೆಂಚ್ ಕೋರ್ಟ್ ವಾರ್ಡ್‌ನ ಮತಗಟ್ಟೆಯಾದ ಬೋವಿಕ್ಕಾನ ಎಯುಪಿ ಶಾಲೆಯಲ್ಲಿ ನಿನ್ನೆ ಸಂಜೆ 4.30ರ ವೇಳೆ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ಈ ಕುರಿತು ಆದೂರು ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ಈ ರೀತಿ ತಿಳಿಸಲಾಗಿದೆ- ಅಧ್ಯಾಪಿಕೆಯಾದ ಅನಸೂಯ ಎಂಬವರು ಮತಗಟ್ಟೆಯ ಪ್ರಿಸೈಡಿಂಗ್ ಆಫೀಸರ್ ಆಗಿರುವ ಪ್ರಸ್ತುತ ಮತಗಟ್ಟೆಗೆ ಕರ್ತವ್ಯಕ್ಕಾಗಿ ಸನೂಪ್ ಜಾನ್ ತಲುಪಿದ್ದರು. ಮುಂಡು ಹಾಗೂ ಶರ್ಟ್ ಧರಿಸಿ ಇವರು ಬೂತ್‌ಗೆ ತಲುಪಿದ್ದರು. ಪ್ರಿಸೈಡಿಂಗ್ ಆಫೀಸರ್ ಇದನ್ನು ಪ್ರಶ್ನಿಸಿದಾಗ ತಾನು ಪೊಲೀಸ್ ಆಗಿದ್ದೇನೆಂದು ಪ್ರತಿಕ್ರಿಯಿಸಿದರು. ಪೊಲೀಸ್ ಆದರೆ ಸಮವಸ್ತ್ರ ಬೇಡವೇ ಎಂದು ಪ್ರಿಸೈಡಿಂಗ್ ಆಫೀಸರ್ ಪ್ರಶ್ನಿಸಿದಾಗ ನೀವ್ಯಾಕೆ ಸೀರೆ ಧರಿಸಲಿಲ್ಲವೆಂದು ಪೊಲೀಸ್ ಮರುಪ್ರಶ್ನೆ ಹಾಕಿದ್ದಾನೆ. ಈ ವಿಷಯವನ್ನು ಸ್ಥಳದಲ್ಲಿದ್ದ ಪೊಲೀಸ್ ಇಲೆಕ್ಷನ್ ಸಬ್ ಡಿವಿಜನ್ ಹೊಣೆಗಾರಿಯುಳ್ಳ ನಾರ್ಕೋಟಿಕ್ ಸೆಲ್ ಡಿವೈಎಸ್ಪಿ ಅನಿಲ್ ಕುಮಾರ್‌ಗೆ ಫೋನ್ ಕರೆ ಮಾಡಿ ತಿಳಿಸಿದ್ದರು. ಇದರಂತೆ ಇನ್‌ಸ್ಪೆಕ್ಟರ್ ಎಂ.ವಿ. ವಿಷ್ಣು ಪ್ರಸಾದ್ ಹಾಗೂ ತಂಡ ಮತಗಟ್ಟೆಗೆ ತಲುಪಿದೆ. ಪ್ರಿಸೈಂಡಿಂಗ್ ಆಫೀಸರ್‌ರೊಂದಿಗೆ ಘಟನೆ ಕುರಿತು ವಿಷಯ ಕೇಳಿ ತಿಳಿದುಕೊಂಡರು. ಪೊಲೀಸ್ ಎಂದು ತಿಳಿಸಿದ ವ್ಯಕ್ತಿ ಒಳಗೆ ಮಲಗಿರುವುದಾಗಿ ಪ್ರಿಸೈಡಿಂಗ್ ಆಫೀಸರ್ ತಿಳಿಸಿದ್ದಾರೆ. ಇದರಂತೆ ಎಎಸ್‌ಐ ಸತ್ಯಪ್ರಕಾಶನ್ ಪೊಲೀಸ್‌ನನ್ನು ಮತಗಟ್ಟೆಯಿಂದ ಹೊರಗೆ ಕರೆದುಕೊಂಡು ಬಂದರು. ಮದ್ಯ ಸೇವಿಸಿದ್ದೀರೆ ಎಂಬ ಪ್ರಶ್ನೆಗೆ ತಾನು ಇಂದು ಮದ್ಯ ಸೇವಿಸಿಲ್ಲವೆಂದೂ ನಿನ್ನೆ ಮದ್ಯ ಸೇವಿಸಿರುವುದಾಗಿ ಪೊಲೀಸ್ ತಿಳಿಸಿದ್ದಾನೆ. ಆದರೆ ಮಾತನಾಡುವಾಗ ಮದ್ಯದಮಲಿನಲ್ಲಿರುವುದು ತಿಳಿದುಬಂದ ಹಿನ್ನೆಲೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಬೇಕೆಂದು ತಿಳಿಸಿದರು. ಈ ವೇಳೆ ಸಮವಸ್ತ್ರ ಧರಿಸಿ ಬರುವುದಾಗಿ ತಿಳಿಸಿ ರೆಸ್ಟ್ ರೂಂಗೆ ಹೋದ ಪೊಲೀಸ್ ಬ್ಯಾಗ್‌ನೊಂದಿಗೆ ಹೊರಗಿಳಿದು ಓಡಿದ್ದಾನೆ. ಮತಗಟ್ಟೆಯ ಹೊರಗೆ ನಿಲ್ಲಿಸಿದ್ದ ಕಾರಿಗೆ ಹತ್ತಿ ಅಪರಿಮಿತ ವೇಗದಲ್ಲಿ ಪರಾರಿಯಾಗಿದ್ದಾನೆ. ಸ್ಥಳದಲ್ಲಿದ್ದ ಪೊಲೀಸ್‌ನನ್ನು ದೂಡಿಹಾಕಿ ಸನೂಪ್ ಜೋನ್ ಅಲ್ಲಿಂದ ಪರಾರಿಯಾಗಿರುವುದಾಗಿ ಯೂ ಪೊಲೀಸರು ತಿಳಿಸಿದ್ದಾರೆ. ಮತಗಟ್ಟೆಗೆ ಮದ್ಯ ಸೇವಿಸಿ ತಲುಪಿ ನಾಟಕೀಯ ವಿದ್ಯಮಾನಗಳನ್ನು ಸೃಷ್ಟಿಸಿದ ಪೊಲೀಸ್‌ನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂಬ ಸೂಚನೆಯಿದೆ.







