ಬೆಳ್ಳೂರು ಶಾಲೆ ಕಲೋತ್ಸವ ಉದ್ಘಾಟನೆಪಂ. ಅಧ್ಯಕ್ಷೆಯನ್ನು ಅವಗಣಿಸಿರುವುದಾಗಿ ಬಿಜೆಪಿ ಆರೋಪ

ಬೆಳ್ಳೂರು: ಬೆಳ್ಳೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಕಲೋತ್ಸವದ ಉದ್ಘಾಟನೆ ಕಾರ್ಯಕ್ರಮದಲ್ಲಿ ಸೂಕ್ತ ಪ್ರಾಧಾನ್ಯತೆ ನೀಡದೆ ಬೆಳ್ಳೂರು ಪಂಚಾಯತ್ ಅಧ್ಯಕ್ಷೆ ಮಾಲಿನಿ ಅವರನ್ನು ಅವಗಣಿಸಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. 
ಶಾಸಕ ಕಲ್ಲಟ್ರ ಮಾಹಿನ್ ಅವರು ಉದ್ಘಾಟನೆ ಮಾಡುವ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪ್ರಕಾರ ಶಾಲೆ ಕಾರ್ಯಾಚರಿಸುವ ಪ್ರದೇಶದ ಪಂಚಾಯತ್ ನ ಅಧ್ಯಕ್ಷೆ ಮಾಲಿನಿ ಅವರು ಅಧ್ಯಕ್ಷತೆ ವಹಿಸಬೇಕಾಗಿತ್ತು. ಅಲ್ಲದಿದ್ದಲ್ಲಿ ಅವರಿಗೆ ಮುಖ್ಯ ಅತಿಥಿ ಸ್ಥಾನ ನೀಡಬೇಕಾಗಿತ್ತು. ಅವೆರಡೂ ಸ್ಥಾನ ಗಳಿಗೆ ಅವರನ್ನು ಪರಿಗಣಿಸದೆ ಶುಭಾಶಂಸನೆ ಮಾಡುವವರ ಸಾಲಿನಲ್ಲಿ ಸೇರಿಸಲಾಗಿದೆ. ಸಂಬAಧಪಟ್ಟ ಅಧಿಕಾರಿಗಳ ಈ ಕ್ರಮ ಖಂಡನೀಯ ಎಂದು ಬಿಜೆಪಿ ತಿಳಿಸಿದೆ. ಮನ:ಪೂರ್ವಕವಾಗಿಯೇ ಪಂಚಾಯತ್ ಅಧ್ಯಕ್ಷೆ ಯನ್ನು ಅವಗಣಿಸಲಾಗಿದೆ. ಇದರ ಹಿಂದೆ ಕೆಲವು ರಾಜಕೀಯ ಹಿತಾಸಕ್ತಿಗಳ ಹುನ್ನಾರವಿದೆ. ಆದ್ದರಿಂದ ಈ ಕುರಿತು ಜಿಲ್ಲಾಧಿಕಾರಿಗೆ ದೂರು ನೀಡಿ ಕಾರಣಕರ್ತರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುವುದಾಗಿ ಬಿಜೆಪಿ ಬೆಳ್ಳೂರು ಪಂಚಾಯತ್ ಸಮಿತಿ ಅಧ್ಯಕ್ಷ ರವೀಂದ್ರನಾಥ ಶೆಟ್ಟಿ ಸಸಿಹಿತ್ಲು ತಿಳಿಸಿದ್ದಾರೆ.

You cannot copy contents of this page