ಉಪ್ಪಳ: ಕಳೆದ 22 ವರ್ಷಗಳಿಂದ ಉಪ್ಪಳದಲ್ಲಿ ಕಾರ್ಯಾಚರಿಸುತ್ತಿರುವ ಸಿಟಿ ಗೋಲ್ಡ್ ಆಂಡ್ ಡೈಮಂಡ್ಸ್ನ ಇನ್ನಷ್ಟು ವಿಶಾಲವಾದ ನೂತನ ಶೋರೂಂ ಇಂದು ಉದ್ಘಾಟನೆಗೊಳ್ಳಲಿದೆ. ಸಯ್ಯೀದ್ ಅಲಿ ತಂಙಳ್ ಕುಂಬೋಳ್ ಉದ್ಘಾಟನೆ ನೆರವೇರಿಸುವರು. ಲೈಟ್ವೈಟ್, ಡೈಲಿವೇರ್ ಆಭರಣಗಳ ಶೋರೂಂ ಆದ ಕೇವಾ ಬೋಕ್ಸ್ನ್ನು ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸುವರು. ಖ್ಯಾತ ವಯಲಿನಿಸ್ಟ್ ಗೋಕುಲ್ಕೃಷ್ಣರ ಲೈವ್ ಪರ್ಫೋರ್ಮೆನ್ಸ್ ಈ ವೇಳೆ ಆಯೋಜಿಸಲಾಗಿದೆ. ಉದ್ಘಾಟನೆಯಂಗವಾಗಿ ಸಿಟಿ ಗೋಲ್ಡ್ ಗ್ರಾಹಕರಿಗಾಗಿ ಪ್ರೀಮಿಯಂ, ವಿಂಟೇಜ್ ಹೊರತುಪಡಿಸಿರುವ ಚಿನ್ನಾಭರಣಗಳಿಗೆ ಮಜೂರಿ 4,9 ಶೇಕಡಾ ಮಾತ್ರವಾಗಿದೆ. ಅಲ್ಲದೆ ಡೈಮಂಡ್ ಆಭರಣಗಳಿಗೆ ಕ್ಯಾರೆಟ್ಗೆ 15,೦೦೦ ರೂ. ರಿಯಾಯಿತಿ ಆಫರ್ ಲಭ್ಯವಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.






