ಮಂಜೇಶ್ವರ ಬ್ಲೋಕ್ ಪಂಚಾಯತ್‌ನಲ್ಲಿ ಮಾದಕ ವಸ್ತು ಜಾಗೃತಿ ತರಗತಿ, ತೂಫಾನ್ ದ್ವಿತೀಯ ಹಂತ ಉದ್ಘಾಟನೆ

ಮಂಜೇಶ್ವರ: ಮಾದಕ ವಸ್ತುಗಳ ವ್ಯಾಪಕ ಬಳಕೆ ಮತ್ತು ವಿತರಣೆಯನ್ನು ತಡೆಯುವ ಉದ್ದೇಶದಿಂದ ಸರಕಾರ ಜ್ಯಾರಿಗೊಳಿಸುತ್ತಿರುವ ತೂಫಾನ್ ಯೋಜನೆಯ ಎರಡನೇ ಹಂತವನ್ನು ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದರ ಅಂಗವಾಗಿ ಮಂಜೇಶ್ವರ ಬ್ಲೋಕ್ ಪಂಚಾಯತ್‌ನಲ್ಲಿ ಮಾದಕ ವಸ್ತು ವಿರೋಧಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಯಿತು. ತೂಫಾನ್ ೨.೦ದ ರಾಜ್ಯಮಟ್ಟದ ಉದ್ಘಾಟನೆಯನ್ನು ವೆಂಙರದಲ್ಲಿ ಗೃಹ ಸಚಿವ ರಮೇಶ ಚೆನ್ನಿತ್ತಲ ಉದ್ಘಾಟಿಸಿದ್ದು, ಆ ಬಳಿಕ ಮಂಜೇಶ್ವರ ಬ್ಲೋಕ್ ಪಂಚಾಯತ್‌ನಲ್ಲಿ ನಡೆದ ಕಾರ್ಯಕ್ರಮವನ್ನು ಬ್ಲೋಕ್ ಪಂ. ಅಧ್ಯಕ್ಷ ಯು.ಕೆ.ಸೈಫುಲ್ಲ ತಂಙಳ್ ಉದ್ಘಾಟಿಸಿದರು. ಇದೇ ವೇಳೆ ರಾಜ್ಯಮಟ್ಟದ ಉದ್ಘಾಟನಾ ಕಾರ್ಯಕ್ರಮದ ನೇರ ಪ್ರಸಾರವನ್ನು, ಮಾದಕ ವಸ್ತು ವಿರೋಧಿ ಜಾಗೃತಿ ತರಗತಿ ಹಮ್ಮಿಕೊಳ್ಳಲಾಯಿತು. ಪೊಲೀಸ್ ಇಲಾಖೆಯ ಪ್ರತಿನಿಧಿಯಾಗಿ ಮಂಜೇಶ್ವರ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಶಬರಿಕೃಷ್ಣನ್ ಬ್ಲೋಕ್ ಪಂಚಾಯತ್ ಸದಸ್ಯರಿಗೆ ‘ತೂಫಾನ್ ವಾರಿಯರ್’ ಬ್ಯಾಡ್ಜ್ ವಿತರಿಸಿದರು. ಬ್ಲೋಕ್ ಪಂಚಾಯತ್ ಜನಪ್ರತಿನಿಧಿಗಳು. ವಿವಿಧ ಇಲಾಖೆಗಳ ಅಧಿಕಾರಿಗಳು , ಮಂಜೇಶ್ವರ ಕ್ಯಾಂಪಸ್‌ನ ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದರು. ಮಾದಕ ವಸ್ತು ವಿರೋಧಿ ಪ್ರತಿಜ್ಞೆ ಸ್ವೀಕರಿಸಲಾಯಿತು. ಬ್ಲೋಕ್ ಪಂಚಾಯತ್ ಉಪಾಧ್ಯಕ್ಷೆ ಕಮಲಾಕ್ಷಿ ಅಧ್ಯಕ್ಷತೆ ವಹಿಸಿದರು. ಸ್ಥಾಯೀ ಸಮಿತಿ ಅಧ್ಯಕ್ಷರಾದ ಮೋಹನ್ ರೈ, ಮೊಹಮ್ಮದ್ ಹನೀಫ್ ಸಹಿತ ಹಲವರು ಮಾತನಾಡಿದರು.

RELATED NEWS

You cannot copy contents of this page