ಮಂಜೇಶ್ವರ ತಾಲೂಕು ಮಟ್ಟದ ಓಣಂ ಸಂತೆ ಉದ್ಘಾಟನೆ

ಸೀತಾಂಗೋಳಿ:  ಮಂಜೇಶ್ವರ ತಾಲೂಕು ಮಟ್ಟದ ಓಣಂ ಸಂತೆಯ ಉದ್ಘಾಟನೆ ಎಡನಾರು ಕಣ್ಣೂರು ಸೇವಾ ಸಹಕಾರಿ ಬ್ಯಾಂಕಿನ ನೇತೃತ್ವದಲ್ಲಿ ಸೀತಾಂಗೋಳಿಯಲ್ಲಿ ನಡೆಯಿತು. ಬ್ಯಾಂಕ್‌ನ ಅಧ್ಯಕ್ಷ ಶ್ಯಾಮರಾಜ ದೊಡ್ಡಮಾಣಿ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್ ಅಧ್ಯಕ್ಷ ಡಿ. ಸುಬ್ಬಣ್ಣ ಆಳ್ವ ಉದ್ಘಾಟಿಸಿ ಮಾತನಾಡಿದರು. ಅಸಿಸ್ಟೆಂಟ್ ರಿಜಿಸ್ಟ್ರಾರ್ ರವೀಂದ್ರ ಎ. ಓಣಂ ಕಿಟ್‌ನ ಪ್ರಥಮ ವಿತರಣೆಯ ಮಾಡಿದರು. ವಿವಿಧ ಬ್ಯಾಂಕ್‌ಗಳ ಅಧ್ಯಕ್ಷರು, ವಿವಿಧ ಸಂಘಟನೆಗಳ ಪ್ರಮುಖರು ಉಪಸ್ಥಿತರಿ ದ್ದರು. ಬ್ಯಾಂಕಿನ ನಿರ್ದೇಶಕರು ಹಾಗೂ ಸರ್ಕಲ್ ಸಹಕಾರಿ ಯೂನಿಯನ್‌ನ ನಿರ್ದೇಶಕರು ಆಗಿರುವ ಶ್ರೀಕೃಷ್ಣ ಪ್ರಸಾದ ಸ್ವಾಗತಿಸಿದರು. ಎಡನಾಡು ಬ್ಯಾಂಕ್‌ನ ಕಾರ್ಯದರ್ಶಿ ಶ್ರೀಕೃಷ್ಣ ಭಟ್ ವಂದಿಸಿದರು.

You cannot copy contents of this page