ಮಜೀರ್ಪಳ್ಳ -ಗೋಳಿಪಡ್ಪು ಕಾಂಕ್ರೀಟ್ ರಸ್ತೆ ಉದ್ಘಾಟನೆ

ಮಂಜೇಶ್ವರ: ಮೀಂಜ ಪಂಚಾ ಯತ್‌ನ 1ನೇ ವಾರ್ಡ್ ಮಜೀರ್ಪಳ್ಳ-ಗೋಳಿಪಡ್ಪು ಕಾಂಕ್ರೀಟ್ ರಸ್ತೆ ಉದ್ಘಾಟನೆ ನಿನ್ನೆ ನಡೆಯಿತು. ಉದ್ಯೋಗ ಖಾತರಿ ವಾರ್ಡ್ ಸದಸ್ಯ, ಕ್ಷೇಮ ಕಾರ್ಯ ಸ್ಥಾಯೀ ಸಮಿತಿ ಅಧ್ಯಕ್ಷ  ಬಾಬು ಕುಳೂರು ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್ ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ ಉದ್ಘಾಟಿಸಿದರು. ಉಪಾಧ್ಯಕ್ಷ ಜಯರಾಮ ಬಲ್ಲಂಗು ಡೇಲು, ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಸರಸ್ವತಿ ಬಾಳ್ಯೂರು, ವಾರ್ಡ್ ಪ್ರತಿನಿಧಿ ಮಿಸ್ರಿಯಾ, ಪಂಚಾಯತ್ ಕಾರ್ಯದರ್ಶಿ ಸಜೀನ, ಮೊಹಮ್ಮದ್, ಸಲೀಂ ಮಜೀರ್ಪಳ್ಳ, ಉದ್ಯೋಗ ಖಾತರಿ ಅಧಿಕಾರಿಗಳಾದ ಅಜಿತ್, ರೇವತಿ, ವಸಂತಿ, ಪ್ರೀತಿ, ಅನಿತ ಉಪಸ್ಥಿತರಿದ್ದರು. ಅಜಿತ್ ಸ್ವಾಗತಿಸಿ, ಆಶಾ ವರ್ಕರ್ ವೈಶಾಲಿ ವಂದಿಸಿದರು.

You cannot copy contents of this page