ಮಂಜೇಶ್ವರ ಕಾನೂನು ಅಧ್ಯಯನ ಕೇಂದ್ರಕ್ಕೆ ಶಾಸಕರ ನಿಧಿ ಉಪಯೋಗಿಸಿ ನಿರ್ಮಿಸಿದ ಕಟ್ಟಡ ಉದ್ಘಾಟನೆ

ಮಂಜೇಶ್ವರ: ಕಣ್ಣೂರು ವಿವಿಯ ಮಂಜೇಶ್ವರ ಕ್ಯಾಂಪಸ್‌ನಲ್ಲಿರುವ  ಸ್ಕೂಲ್ ಆಫ್  ಸ್ಟಡೀಸ್‌ಗಾಗಿ ನಿರ್ಮಿಸಿದ ಕಟ್ಟಡವನ್ನು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು.ಶಾಸಕರ ವಿಧಾನಸಭಾ ಮಂಡಲ ಆಸ್ತಿ ಅಭಿವೃದ್ಧಿ ಸ್ಕೀಂನಲ್ಲಿ ಒಳಪಡಿಸಿ ೫೧ ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಮೂರು ವರ್ಷದ ಎಲ್‌ಎಲ್‌ಬಿ, ಎಲ್ ಎಲ್‌ಎಂ ಎಂಬೀ ಕೋರ್ಸ್‌ಗಳಿಗೆ ೧೦೦ರಷ್ಟು ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿರುವ ಜಿಲ್ಲೆಯ ಮೊದಲ ಕಾನೂನು ತರಬೇತಿ ಕೇಂದ್ರವಾಗಿದೆ ಇದು.  ಈ ಸಂಸ್ಥೆಯ ಅಭಿವೃದ್ಧಿಗೆ ಕೈಜೋಡಿಸುವುದಾಗಿ, ಅಗತ್ಯದ ಮೊತ್ತ ಲಭ್ಯಗೊಳಿಸುವುದಾಗಿ ಸಂಸದರು ಉದ್ಘಾಟನಾ ಭಾಷಣದಲ್ಲಿ ತಿಳಿಸಿದರು.ಶಾಸಕ ಎಕೆಎಂ ಅಶ್ರಫ್ ಅಧ್ಯಕ್ಷತೆ ವಹಿಸಿದರು ವಿವಿ ಸಿಂಡಿಕೇಟ್ ಸದಸ್ಯ ಡಾ. ಎ. ಅಶೋಕ್  ಸ್ವಾಗತಿಸಿದರು. ಮಂಜೇಶ್ವರ ಬ್ಲೋಕ್ ಪಂಚಾಯತ್ ಅಧ್ಯಕ್ಷೆ ಶಮೀನ ಟೀಚರ್, ಉಪಾಧ್ಯಕ್ಷ ಪಿ.ಕೆ. ಹನೀಫ್, ಮಂಜೇಶ್ವರ ಪಂ. ಅಧ್ಯಕ್ಷೆ ಜೀನ್ ಲವೀನಾ ಮೊಂತೇರೊ, ಉಪಾಧ್ಯಕ್ಷ ಸಿದ್ದಿಕ್ ಮುಹಮ್ಮದ್, ಜಿಪಂ ಸದಸ್ಯೆ  ಕೆ. ಕಮಲಾಕ್ಷಿ, ವಿವಿ ಸಿಂಡಿಕೇಟ್ ಸದಸ್ಯ ಪಿ. ಸಜಿತ್ ಕುಮಾರ್, ಎನ್. ಅಬ್ದುಲ್ ಹಮೀದ್, ಯಾದವ ಬಜಾಜೆ, ಇ.ಎಸ್. ಪ್ರಸನ್ನ ಕುಮಾರಿ, ಯೂನಿಯನ್ ಅಧ್ಯಕ್ಷ ಚಿರಾಗ್ ಕೆ.ಪಿ, ಜೋಯಿಂಟ್ ರಿಜಿಸ್ಟ್ರಾರ್ ಕೆ.  ನಾರಾಯಣದಾಸ್ ಮಾತನಾಡಿದರು.

You cannot copy contents of this page