ಅಗಲ್ಪಾಡಿ: ಅಗಲ್ಪಾಡಿ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ನೂತನ ಮುಖಮಂಟಪ ಲೋಕಾರ್ಪಣೆ ಕಾರ್ಯಕ್ರಮ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು. ಧಾರ್ಮಿಕ ಸಭೆಯನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿ ಮಾತನಾಡಿದರು. ಸುಬ್ರಹ್ಮಣ್ಯ ಭಟ್ ತಲೇಕ ಅಧ್ಯಕ್ಷತೆ ವಹಿಸಿದರು. ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಶುಭ ಹಾರೈಸಿದರು. ಸಂಕಪ್ಪ ಪೂಜಾರಿ ಉಡುಪಿ, ಡಾ. ಮನೋಹರ ಎಂ.ಜಿ. ಮುಳ್ಳೇರಿಯ, ಕೆ.ಪಿ. ಮೋಹನ್ದಾಸ್, ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ, ಕೃಷ್ಣಮೂರ್ತಿ ಪುದುಕೋಳಿ, ಡಾ. ಕಿಶೋರ್ ಕುಣಿಕುಳ್ಳಾಯ, ಮಧುಸೂದನ ಆಯರ್ ಮಂಗಳೂರು, ರವಿಚಂದ್ರ ಮಂಗಳೂರು, ಹರೀಶ್ ಗೋಸಾಡ, ವೆಂಕಟ್ರಮಣ ಮಾಸ್ತರ್ ಉಪ್ಪಂಗಳ, ಹರಿನಾರಾಯಣ ಮಾಸ್ತರ್ ಅಗಲ್ಪಾಡಿ, ಆನಂದ ಕೆ. ಮವ್ವಾರ್, ಪ್ರಶಾಂತ್ ಕುಣಿಕುಳ್ಳಾಯ ಉಬ್ರಂಗಳ, ಮುರಳಿ ಮಧೂರು, ಕರಿಯಪ್ಪ ಮಾರ್ಪನಡ್ಕ, ಬಾಬು ಮಾಸ್ತರ್ ಅಗಲ್ಪಾಡಿ, ಸುಧಾಮ ಪದ್ಮಾರು ಭಾಗವಹಿಸಿದರು. ಲಾವಣ್ಯ ಗಿರೀಶ್ ಪ್ರಾರ್ಥನೆ ಹಾಡಿದರೆ, ರಾಜೇಶ್ ಮಾಸ್ತರ್ ಅಗಲ್ಪಾಡಿ ಸ್ವಾಗತಿಸಿ, ಪ್ರೊ| ಎ. ಶ್ರೀನಾಥ್ ವಂದಿಸಿದರು. ರಮೇಶ್ಕೃಷ್ಣ ಪದ್ಮಾರು ನಿರೂಪಿಸಿದರು.
ಸಂಗೀತಾರ್ಚನೆ ದ್ವಾದಶ ನಾಳೀಕೇರ ಶ್ರೀ ಮಹಾಗಣಪತಿ ಹೋಮ, ವಸಂತ ಪೈ ಬದಿಯಡ್ಕ ಅವರಿಂದ ದೀಪ ಪ್ರಜ್ವಲನೆ, ಚಪ್ಪರ ಮದುವೆ, ತುಲಾಭಾರ ಸೇವೆ, ವಿವಿಧ ಸ್ಪರ್ಧೆಗಳು, ಭಜನೆ ಜರಗಿತು. ಉದ್ಘಾಟನಾ ಸಮಾರಂಭದಲ್ಲಿ ಜಯದೇವ ಖಂಡಿಗೆ, ಉದಯ ಭಟ್ ಕೋಳಿಕಜೆ, ಸುವರ್ಣ ಮಾಸ್ತರ್ ಅಗಲ್ಪಾಡಿ, ಐತ್ತಪ್ಪ ಮವ್ವಾರು, ರವೀಂದ್ರನಾಥ ಭಂಡಾರಿ ನಾರಂಪಾಡಿ, ನಿರಂಜನ ಮಾಸ್ತರ್ ಪೆರಡಾಲ ಉಪಸ್ಥಿತರಿದ್ದರು. ಮುದ್ದುಕೃಷ್ಣ- ರಾಧೆಯರ ವೇಷ ಧರಿಸಿದ ಪುಟಾಣಿಗಳ ಶೋಭಾಯಾತ್ರೆ ಜರಗಿತು.