ಕುಂಬಳೆ: ಪಚ್ಚಂಬಳ ಸಫಾ ನಗರದ ಮುಹಮ್ಮದ್ (63)ಸಹಿತ ನಾಲ್ಕು ಮಂದಿಗೆ ಇರಿದು ಗಾಯಗೊಳಿಸಿದ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪಚ್ಚಂಬಳ ನೀರ್ಜಾಲ್ ನವಾಸ್ ಮಂಜಿಲ್ನ ಅಬ್ದುಲ್ ಇರ್ಷಾದ್ ಯಾನೆ ಲುಟಾಪಿ ಇರ್ಷಾದ್ (34) ಬಂಧಿತ ಆರೋಪಿಯಾಗಿದ್ದಾನೆ. ಈ ತಿಂಗಳ ೪ರಂದು ಮುಂಜಾನೆ 1 ಗಂಟೆಗೆ ಘಟನೆ ನಡೆದಿತ್ತು. ಮನೆಯಲ್ಲಿ ನಿದ್ರಿಸಿದ್ದ ಮುಹಮ್ಮದ್ರನ್ನು ಕರೆದೆಬ್ಬಿಸಿ ಅಬ್ದುಲ್ ಇರ್ಷಾದ್ ಹಾಗೂ ಸಹೋದರ ದಿಲ್ಶಾದ್ ಇರಿದು ಗಂಭೀರಗಾಯಗೊಳಿಸಿರು ವುದಾಗಿ ದೂರಲಾಗಿದೆ. ಮುಹಮ್ಮದ್ರಿಗೆ ಇರಿಯುವುದನ್ನು ತಡೆಯಲೆತ್ನಿಸಿದ ಸಫಾ ನಗರದ ಎಸ್.ಎ ಶೆರೀಫ್, ಸ್ನೇಹಿತರಾದ ರಫೀಕ್, ಮುಹಮ್ಮದ್ ನವಾಸ್ ಎಂಬಿವರಿಗೂ ಇರಿದು ಗಾಯಗೊಳಿ ಸಲಾಗಿತ್ತು. ಮುಹಮ್ಮದ್ರ ಹೊಟ್ಟೆಗೆ ಗಂಭೀರ ಇರಿತವುಂಟಾಗಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಶೆರೀಫ್ರ ಎದೆ, ನವಾಸ್ರ ಸೊಂಟ ಹಾಗೂ ರಫೀಕ್ರ ಕಾಲಿಗೆ ಇರಿಯಲಾಗಿತ್ತು. ಥಾರ್ ಜೀಪಿನಲ್ಲಿ ತಲುಪಿದ ಅಬ್ದುಲ್ ಇರ್ಷಾದ್ ಯಾನೆ ಲುಟಾಪಿ ಇರ್ಷಾದ್ ಹಾಗೂ ಸಹೋದರ ದಿಲ್ಶಾದ್ ಇರಿದು ಗಾಯಗೊಳಿಸಿ ಪರಾರಿಯಾಗಿದ್ದರು. ಈ ಪ್ರಕರಣದ ತನಿಖೆಗೆ ಪ್ರತ್ಯೇಕ ತಂಡ ರೂಪೀಕರಿಸಲಾಗಿತ್ತು. ತನಿಖೆ ನಡೆಯುತ್ತಿದ್ದಂತೆ ಆರೋಪಿಗಳು ಊರಿನಿಂದ ಪರಾರಿಯಾಗಿದ್ದರು. ಆರೋಪಿಗಳ ಪೈಕಿ ಅಬ್ದುಲ್ ಇರ್ಷಾದ್ ಬೆಂಗಳೂರು, ಮೈಸೂರು ಕೇಂದ್ರೀಕರಿಸಿ ತಲೆಮರೆಸಿಕೊಂಡಿದ್ದ ನೆನ್ನಲಾಗಿದೆ. ಈತನ ಪತ್ತೆಗಾಗಿ ಪೊಲೀಸರು ತನಿಖೆ ತೀವ್ರಗೊಳಿಸುತ್ತಿ ದ್ದಂತೆ ಈತ ನಿನ್ನೆ ಊರಿಗೆ ಬಂದ ವಿಷಯ ಪೊಲೀಸರಿಗೆ ಲಭಿಸಿತ್ತು. ಇದರಂತೆ ಸರ್ಕಲ್ ಇನ್ಸ್ಪೆಕ್ಟರ್ ಅನೂಪ್ಕೃಷ್ಣ ಆರ್.ಪಿ, ಸ್ಟೇಶನ್ ಹೌಸ್ ಆಫೀಸರ್ ಎಸ್. ಅನೂಪ್, ಎಸ್ಐ ವಿನೋದ್,ಸಿಪಿಒ ಗಳಾದ ಸಂದೀಪ್, ಜೋಸ್, ಕಲೇಶ್, ಪ್ರವೀಣ್ ಎಂಬಿವರನ್ನೊಳಗೊಂಡ ತಂಡ ನಿನ್ನೆ ರಾತ್ರಿ ಪಚ್ಚಂಬಳದಲ್ಲಿರುವ ಮನೆಯನ್ನು ಸುತ್ತುವರಿದು ಅಬ್ದುಲ್ ಇರ್ಷಾದ್ನನ್ನು ಬಂಧಿಸಿದೆ. ಈತನನ್ನು ಇಂದು ನ್ಯಾಯಾಲಯದಲ್ಲಿ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಅಬ್ದುಲ್ ಇರ್ಷಾದ್ 5 ಕೊಲೆಯತ್ನ ಪ್ರಕರಣ ಸಹಿತ 10 ಪ್ರಕರಣಗಳಲ್ಲಿ ಆರೋಪಿಯಾಗಿ ದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಈ ಹಿಂದೆ ಈತನ ವಿರುದ್ಧ ಕಾಪಾ ಪ್ರಕರಣ ದಾಖಲಿಸಿ ಜೈಲಿನಲ್ಲಿರಿಸ ಲಾಗಿತ್ತು. ಅದರ ಕಾಲಾವಧಿ ಮುಗಿದು ಬಿಡುಗಡೆಗೊಂಡ ತಕ್ಷಣ ಮುಹಮ್ಮದ್ರ ಮೇಲೆ ಈತ ಆಕ್ರ ಮಣ ನಡೆಸಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಇನ್ನೋರ್ವ ಆರೋಪಿಯಾದ ದಿಲ್ಶಾದ್ನ ಪತ್ತೆಗಾಗಿ ತನಿಖೆ ತೀವ್ರಗೊಳಿಸಿರು ವುದಾಗಿ ಪೊಲೀಸರು ತಿಳಿಸಿದ್ದಾರೆ.






