ಕಾಸರಗೋಡು: ಕಾಸರಗೋಡು ನಗರಸಭಾ ಕಾರ್ಯಾಲಯದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಅಧ್ಯಕ್ಷ ಅಬ್ಬಾಸ್ ಬೀಗಂ ಧ್ವಜಾರೋ ಹಣಗೈದರು. ಒಗ್ಗಟ್ಟಿನಲ್ಲಿ ಬಿರುಕು ಮೂಡಿಸಿ ವಿಭಾಗೀಯತೆ ಸೃಷ್ಟಿಸಲು ಯತ್ನಿಸುವವರನ್ನು ದೂರ ಮಾಡಬೇಕೆಂದು ಯಾವುದೇ ಬೆಲೆ ತೆತ್ತಾದರೂ ದೇಶದ ಜನರ ಐಕ್ಯವನ್ನು ಸಂರಕ್ಷಿಸಬೇಕೆಂದು ಈ ವೇಳೆ ಅವರು ಕರೆ ನೀಡಿದರು. ಉಪಾಧ್ಯಕ್ಷೆ ಶಂಸೀದಾ ಫಿರೋಸ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಹೀರ್ ಆಸಿಫ್, ರೀತಾ ಆರ್, ಖಾಲಿದ್ ಪಚ್ಚಕ್ಕಾಡ್, ರಜನಿ ಕೆ, ಕೌನ್ಸಿಲರ್‌ಗಳು, ನಾರಾಯಣ ನಾಯ್ಕ್, ಸಿಬ್ಬಂದಿಗಳು, ನಗರಸಭಾ ಬಡ್ಸ್ ಶಾಲೆ ವಿದ್ಯಾರ್ಥಿಗಳು ಭಾಗವಹಿಸಿದರು.
