ಬದಿಯಡ್ಕ: ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಮಾಜಿ ಪ್ರಧಾನಮಂತ್ರಿ ಇಂದಿರಾಗಾಂಧಿಯವರ ಸಂಸ್ಮರಣೆ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮವನ್ನು ಹಿರಿಯ ಕಾಂಗ್ರೆಸ್ ನೇತಾರ ಚಂದ್ರಹಾಸ ರೈಯವರು ಇಂದಿರಾಗಾಂಧಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಉದ್ಘಾಟಿಸಿದರು. ಬದಿಯಡ್ಕ ಮಂಡಲ ಕಾಂಗ್ರೆಸ್ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ ಅಧ್ಯಕ್ಷತೆ ವಹಿಸಿದರು. ನೇತಾರರಾದ ಗಂಗಾಧರ ಗೋಳಿಯಡ್ಕ, ಜಗನ್ನಾಥ ರೈ, ರಾಮ ಪಟ್ಟಾಜೆ, ಶ್ರೀನಾಥ್ ಬದಿಯಡ್ಕ, ಕೃಷ್ಣದಾಸ್ ಡಿ, ಚಂದ್ರಹಾಸನ್ ಮಾಸ್ತರ್, ಲೀಲಾವತಿ ಪಟ್ಟಾಜೆ, ನಾರಾಯಣ ಭಂಡಾರಿ, ರಾಮ ಗೋಳಿಯಡ್ಕ, ಮಹಮ್ಮದ್ ಪಯ್ಯಲಡ್ಕ, ಮಂಜುನಾಥ, ನಿಜೀಶ್ ಪಟ್ಟಾಜೆ, ಮೊಹಮ್ಮದ್ ಅರಮನೆ, ಸತೀಶನ್ ಪೆರುಮುಂಡ ಉಪಸ್ಥಿತರಿದ್ದರು. ಲೋಹಿತಾಕ್ಷನ್ ಸ್ವಾಗತಿಸಿ, ಕುಮಾರನ್ ನಾಯರ್ ವಂದಿಸಿದರು.





