ಮಂಗಲ್ಪಾಡಿ: ಪ್ರತಾಪನಗರ ಜಂಕ್ಷನ್‌ಗೆ ಬಿಜೆಪಿ ಮಂಡಲ ಉಪಾಧ್ಯಕ್ಷರಾಗಿದ್ದ ದಿ| ಧನರಾಜ್ ಪ್ರತಾಪನಗರ ಇವರ ಹೆಸರನ್ನಿರಿಸಲಾ ಯಿತು. ಪ್ರತಾಪನಗರ ಫ್ರೆಂಡ್ಸ್‌ನ ನೇತೃತ್ವದಲ್ಲಿ ಶಿಲಾಫಲಕವನ್ನು ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಪಿ. ವಲ್ಸರಾಜ್ ಸ್ಥಾಪಿಸಿ ಉದ್ಘಾಟಿಸಿದರು. ಮಂಡಲ ಪ್ರಧಾನ ಕಾರ್ಯದರ್ಶಿ ವಸಂತ ಕುಮಾರ್ ಮಯ್ಯ, ಪಂ. ಸದಸ್ಯೆ ಸುಧಾ ಗಣೇಶ್, ಮುಖಂಡರಾದ ಚಂದ್ರಹಾಸ ಪೂಜಾರಿ, ಮೋಹನ್ ಪೂಜಾರಿ, ಗಣೇಶ್ ಪುಳಿಕುತ್ತಿ, ಜೈ ಹನುಮಾನ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಸುರೇಶ್ ಪುಳಿಕುತ್ತಿ, ಪ್ರತಾಪನಗರ ಫ್ರೆಂಡ್ಸ್‌ನ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
