ಮದ್ಯದಮಲಿನಲ್ಲಿ  ಆಸ್ಪತ್ರೆಯಲ್ಲಿ  ರಂಪಾಟ: ಯುವಕ ಪೊಲೀಸರ ವಶ

ಕಾಸರಗೋಡು: ಮದ್ಯದಮಲಿ ನಲ್ಲಿ  ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿ ರಂಪಾಟದಲ್ಲಿ ತೊಡಗಿದ ಯುವಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಕಾಸರಗೋಡು ಕಸಬಾ ಕಡಪ್ಪುರ ನಿವಾಸಿ ಪೊಲೀಸರ ವಶಕ್ಕೊಳಗಾದ ಯುವಕ. ಈತ ನಿನ್ನೆ ಮದ್ಯದಮಲಿನಲ್ಲಿ  ಆಸ್ಪತ್ರೆಯ ವಿವಿಧ ವಾರ್ಡ್‌ಗಳಿಗೆ ನುಗ್ಗಿ ಅಲ್ಲಿ ದಾಖಲಾಗಿದ್ದ ರೋಗಿಗಳು ಹಾಗೂ   ಪರಿಚಾರಕರನ್ನು ಅವಾಚ್ಯವಾಗಿ ನಿಂದಿಸತೊಡಗಿದ್ದು ಅದನ್ನು ಕಂಡ ಆಸ್ಪತ್ರೆಯ ಸೆಕ್ಯುರಿಟಿ ಸಿಬ್ಬಂದಿಗಳು ಆತನನ್ನು ಆಸ್ಪತ್ರೆಯಿಂದ ಹೊರಕ್ಕೆ ಒಯ್ದು ಪೊಲೀಸರಿಗೆ ನೀಡಿದ್ದಾರೆ. ಇದರಂತೆ ಪೊಲೀಸರು ಯುವಕನನ್ನು ವಶಕ್ಕೆ ತೆಗೆದುಕೊಂಡು ಠಾಣೆಗೊಯ್ದರು. ಆಸ್ಪತ್ರೆಯಲ್ಲಿ ದಾಖಲಾಗಿದ್ದ ಪತ್ನಿಯನ್ನು ಕಾಣಲೆಂದು ಈ ಯುವಕ ಆಸ್ಪತ್ರೆಗೆ ಬಂದಿದ್ದನೆನ್ನಲಾಗಿದೆ.

RELATED NEWS

You cannot copy contents of this page