ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅಪಪ್ರಚಾರದ ಬಗ್ಗೆ ಕೇರಳದಲ್ಲೂ ತನಿಖೆ ನಡೆಸಬೇಕು-ಬಿಜೆಪಿ

ಕಾಸರಗೋಡು: ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಕಲಿ ಪುರಾವೆಗಳನ್ನು ಸೃಷ್ಟಿಸಿ ಅಪಪ್ರಚಾರಗಳನ್ನು ನಡೆಸಿ ಆ ಮೂಲಕ ಶ್ರೀ ಕ್ಷೇತ್ರದ ನಂಬುಗೆಗೆ ಘಾಸಿ ಉಂಟುಮಾಡಲೆತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಯೂಟ್ಯೂಬರ್ ಕೇರಳದ ಮನಾಫ್‌ನನ್ನು ಬಂಧಿಸಿ ತನಿಖೆಯನ್ನು ಕೇರಳಕ್ಕೂ  ವಿಸ್ತರಿಸಿ ಆ ಮೂಲಕ ಇದರ ಹಿಂದಿನ ಷಡ್ಯಂತ್ರವನ್ನು ಪತ್ತೆಹಚ್ಚಬೇಕೆಂದು ಬಿಜೆಪಿ ವಲಯ ಕಾರ್ಯದರ್ಶಿ  ಕೆ. ಶ್ರೀಕಾಂತ್ ಆಗ್ರಹಪಟ್ಟಿದ್ದಾರೆ.

ಆಧಾರರಹಿತವಾದ ಗಂಭೀರ ಆರೋಪಗಳನ್ನು ತೋರಿಸಿ ನಕಲಿ ಪುರಾವೆಗಳನ್ನು ಸೃಷ್ಟಿಸಿ ಅಪಪ್ರಚಾರ ನಡೆಸಲಾಗಿದೆ ಎಂಬುವುದು ಖಾತರಿಗೊಂಡ ಕರ್ನಾಟಕದ ಕಾಂಗ್ರೆಸ್ ಸರಕಾರದ ವಿರುದ್ಧ ಜನರ ಆಕ್ರೋಶ ಇನ್ನಷ್ಟು ತೀವ್ರಗೊಂಡಿದೆ. ಆದ್ದರಿಂದ ತನ್ನ ಮುಖ ರಕ್ಷಿಸಿಕೊಳ್ಳಲಷ್ಟೇ ಈ ಘಟನೆಯ ಬಗ್ಗೆ ಸರಕಾರ ತನಿಖೆಗೆ ಮುಂದಾಯಿತು. ವರ್ಷಗಳ ಹಿಂದೆ ವಾಹನ ಅಪಘಾತ ದಲ್ಲಿ ಸಾವನ್ನಪ್ಪಿದ ಜೋಯ್‌ಎಂಬವರ ಪುತ್ರ ಅನೀಶ್ ಜೋಯ್‌ಯನ್ನು ಕೇರಳಕ್ಕೆ ತಲುಪಿಸಿ ಆ ಬಗ್ಗೆ ತಳಿಪರಂಬ ಪೊಲೀಸರಿಗೆ ನಕಲಿ ದೂರು ನೀಡಲಾಗಿದೆ. ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಸಿ ಹಿಂದೂಗಳ ನಂಬುಗೆಗೆ ಘಾಸಿ ಗೊಳಿಸಿ ಗಲಭೆ ಸೃಷ್ಟಿಸುವಂತೆ ಮಾಡುವ ಯತ್ನ ನಡೆಸಲಾಗಿದೆ. ಇಂತಹ ಒಳ ಸಂಚಿನಲ್ಲಿ ಮನಾಫ್ ಮತ್ತು ಸಮೀರ್ ಎಂಬಿವರ ಸ್ಪಷ್ಟ ಕೈವಾಡವಿದೆ ಯೆಂದೂ ಶ್ರೀಕಾಂತ್ ಆರೋಪಿಸಿದ್ದಾರೆ.

ನಿನ್ನೆ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಶ್ರೀಕಾಂತ್ ಮಾತನಾಡುತ್ತಿದ್ದರು. ಅನನ್ಯ ಭಟ್ ಎಂಬಾಕೆ ನಿಗೂಢವಾಗಿ ನಾಪತ್ತೆಯಾದ ಬಗ್ಗೆ ಧರ್ಮಸ್ಥಳ ಕ್ಷೇತ್ರದ ವಿರುದ್ಧ ನಡೆಸು ತ್ತಿರುವ ಅಪಪ್ರಚಾರದಲ್ಲೂ ಮನಾಫ್ ಮತ್ತು ಸಮೀರ್‌ರ ಕೈವಾಡವಿದೆಯೆಂದು ಸುದ್ಧಿಗೋಷ್ಠಿಯಲ್ಲಿ ಶ್ರೀಕಾಂತ್ ಆರೋಪಿಸಿದ್ದಾರೆ. ಧರ್ಮಸ್ಥಳ ಕ್ಷೇತ್ರದ ಅಪಪ್ರಚಾರ ನಡೆಸಲು ಹಲವು ಸೋಶಿಯಲ್ ಮೀಡಿಯಾ ಫ್ಲಾಟ್‌ಫಾಂ ಗಳನ್ನು ಉಪಯೋಗಿಸ ಲಾಗುತ್ತಿದೆ. ಅಂತಹ ಸೋಶಿಯಲ್ ಮೀಡಿಯಾ ಫ್ಲಾಟ್ ಫಾಂಗಳನ್ನು ಮುಚ್ಚಬೇಕು. ಇಂತಹ ಅಪಪ್ರಚಾರ ನಡೆಸುತ್ತರುವವರ ವಿರುದ್ಧ ಕಠಿಣ ಕಾನೂನುಕ್ರಮ ಕೈಗೊಳ್ಳಬೇಕೆಂದು ಶ್ರೀಕಾಂತ್ ಆಗ್ರಹಪ ಟ್ಟಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಮತ್ತು ವಲಯ ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ ಸುದ್ಧಿಗೋಷ್ಠಿಯಲ್ಲಿ ಭಾಗವಹಿಸಿದರು.

RELATED NEWS

You cannot copy contents of this page