ಕಾರಡ್ಕ ಸಂಭ್ರಮ ದ. 21ರಂದು: ಆಮಂತ್ರಣಪತ್ರಿಕೆ ಬಿಡುಗಡೆ

ಮುಳ್ಳೇರಿಯ: ಕಾರಡ್ಕ ಫೌಂಡೇಶನ್ ಟ್ರಸ್ಟ್ ಇದರ ಆಶ್ರಯದಲ್ಲಿ ದ.ಕ.ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಹಿತ ಕೇರಳ, ಕರ್ನಾಟಕದಲ್ಲಿ ಹಲವು ಪುರಸ್ಕಾರಕ್ಕೆ ಅರ್ಹರಾದ ಯಕ್ಷಗುರು ರಾಘವ ಬಲ್ಲಾಳ್ ಕಾರಡ್ಕ ಇವರ ನೇತೃತ್ವದಲ್ಲಿ ಕಾರಡ್ಕ ಸಂಭ್ರಮ, ಸಾಧಕರಿಗೆ ಪ್ರಶಸ್ತಿ ಪ್ರದಾನ, ಶಿಷ್ಯರ ರಂಗಪ್ರವೇಶ ಕಾರ್ಯಕ್ರಮ ದ.21ರಂದು ಮುಂಡೋಳು ಕ್ಷೇತ್ರದ ಸಭಾ ಮಂಟಪದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಉದ್ಘಾಟಿಸುವರು.ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಕೇರಳ ಕಲಾ ಮಂಡಲ ಅಸಿಸ್ಟೆಂಟ್ ಪ್ರೊಫೆಸರ್  ನೃತ್ಯ ಕಲಾವಿದ ಡಾ. ಆರ್.ಎಲ್.ವಿ. ರಾಮಕೃಷ್ಣನ್ ಸಹಿತ ಹಲವು ಗಣ್ಯರು ಭಾಗವಹಿಸುವರು.

ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ನಿನ್ನೆ ಎಡನೀರು ಮಠದಲ್ಲಿ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಬಿಡುಗಡೆಗೊಳಿಸಿದರು. ಈ ವೇಳೆ  ಕಾರಡ್ಕ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ಸತ್ಯನಾರಾಯಣ ಕೇಕುಣ್ಣಾಯ, ಗೌರವ ಅಧ್ಯಕ್ಷ ಸುಂದರ ಆಚಾರ್ಯ ಮುಳ್ಳೇರಿಯ, ಸ್ಥಾಪಕಾಧ್ಯಕ್ಷ ರಾಘವ ಬಲ್ಲಾಳ್ ಕಾರಡ್ಕ, ಕೋಶಾಧಿಕಾರಿ ದಿನೇಶ್ ಬಲ್ಲಾಳ್ ಎ.ಬಿ, ಪದಾಧಿಕಾರಿಗಳಾದ ಜಯಪ್ರಕಾಶ್ ಎಡನೀರು, ಶಶಿ ಕುಮಾರ್ ಬಲ್ಲಾಳ್, ರವಿ ಬಲ್ಲಾಳ್, ಸಮರ್ಥ್ ವಿಷ್ಣ್ಣು ಕೇಕುಣ್ಣಾಯ ಸಹಿತ ಹಲವರು ಭಾಗವಹಿಸಿದರು.

You cannot copy contents of this page