ಕಣ್ಣೂರು: ಪರಶ್ಶಿನಿಕಡವಿನ ವಿಸ್ಮಯ ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ಹೊಸ ಇಟಾಲಿಯನ್ ರೈಡ್ ರೋಡಿಕ್ಸ್ ಸಿದ್ಧಗೊಂಡಿದೆ. ೧೫ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಪೂರ್ತಿಗೊಳಿಸಲಾಗಿದೆ. ಅಡ್ವೆಂಚರ್ ರೈಡ್ ರೋಡಿಕ್ಸ್ ಇದನ್ನು ಸ್ಪೀಕರ್ ಎ.ಎನ್. ಶಂಸೀರ್ ನಾಳೆ ಬೆಳಿಗ್ಗೆ ಉದ್ಘಾಟಿಸುವರು. ಒಂದು ಬಾರಿ 24 ಮಂದಿಗೆ ರೈಡ್ ನಡೆಸಬಹುದಾದ 22 ಮೀಟರ್ ಎತ್ತರದಲ್ಲಿ ತಿರುಗುವ ಇದು 360 ಡಿಗ್ರಿಯಲ್ಲಿ ತಿರುಗುತ್ತದೆ. ಸಾಹಸಿಕತೆಯನ್ನು ಇಷ್ಟಪಡುವ ಯುವಕರು ಹಾಗೂ ಕುಟುಂಬ ಇದರಲ್ಲಿ ಭಾಗವಹಿಸಬಹುದೆಂದು ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇಮ್ಮಡಿ ಸೇಫ್ಟಿ ಸಿಸ್ಟಂ ರೈಡ್‌ನಲ್ಲಿ ಒಳಪಡಿಸಲಾಗಿದೆ ಎಂದು ವಿಸ್ಮಯ ಪಾರ್ಕ್ ಅಧ್ಯಕ್ಷ ಪಿ.ವಿ. ಗೋಪಿನಾಥ್, ಎಂ. ದಾಮೋದರನ್, ಎಂ.ಪಿ. ಮೋಹನನ್, ವೈಶಾಖ್ ವಿ.ವಿ, ನಿದಿನ್ ಎಂಬಿವರು ಸುದ್ಧಿಗೋಷ್ಠಿಯಲ್ಲಿ ಭಾಗವಹಿಸಿ ತಿಳಿಸಿದರು.







