ಕಾಸರಗೋಡು: ನೀಲೇಶ್ವರ ಪಳ್ಳಿಕೆರೆ ರೈಲ್ವೇ ಮೇಲ್ಸೇತುವೆಯಲ್ಲಿ ಲಾರಿ ಸ್ಕೂಟರ್‌ಗೆ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಜಮಾಯತ್ ಅಧ್ಯಕ್ಷ ಮೃತಪಟ್ಟರು. ಬೇಕಲ ಚಿತ್ತಾರಿ ಕೊಟ್ಟಿಲಂಗಾಡ್ ನಿವಾಸಿ ನಸೀಮ ಮಂಜಿಲ್‌ನ ಹಂಸ (73) ಮೃತಪಟ್ಟವರು. ತಿಚ್ಚಾರಿ ಕೊತ್ತಿಕ್ಕಾಲ್ ಜಮಾಯತ್ ಸಮಿತಿಯ ಅಧ್ಯಕ್ಷನಾಗಿದ್ದರು. ನಿನ್ನೆ ಅಪರಾಹ್ನ 2 ಗಂಟೆಗೆ ರೈಲ್ವೇ ಮೇಲ್ಸೇತುವೆಯಲ್ಲಿ ಅಪಘಾತ ಸಂಭವಿಸಿದೆ.
ಸ್ಕೂಟರ್‌ನಲ್ಲಿ ಚೆರ್ವತ್ತೂರು ಭಾಗದಿಂದ ಹಂಸ ಆಗಮಿಸುತ್ತಿದ್ದರು. ಘಟನೆ ಸ್ಥಳದಲ್ಲೇ ಮರಣ ಸಂಭವಿಸಿದೆ. ನೀಲೇಶ್ವರ ಪೊಲೀಸರು ತಲುಪಿ ಮೃತದೇಹ ವನ್ನು ಕಾಞಂಗಾಡ್ ಜಿಲ್ಲಾ ಆಸ್ಪತ್ರೆ ಶವಾಗಾರಕ್ಕೆ ಕೊಂಡೊಯ್ಯಲಾಗಿದೆ. ಪಯ್ಯನ್ನೂರಿನಲ್ಲಿ ಹಂಸ ಹೋಟೆಲ್ ಹೊಂದಿದ್ದರು.