ಕುಂಬಳೆ: ಪಂಚಾಯತ್ ಬಿಜೆಪಿ ಸಮಿತಿ ವತಿಯಿಂದ ದಿ| ಜಯಕೃಷ್ಣ ಮಾಸ್ತರ್ ಅವರ ೨೭ನೇ ಬಲಿದಾನ ದಿನವನ್ನು ಪಕ್ಷದ ಕಚೇರಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸುವ ಮೂಲಕ ಆಚರಿಸಲಾಯಿತು. ಪಕ್ಷದ ರಾಜ್ಯ ಸಮಿತಿ ಸದಸ್ಯ ವಿ. ರವೀಂದ್ರನ್ ಉದ್ಘಾಟಿಸಿ ಮಾತನಾಡಿದರು. ಉತ್ತರ ವಲಯ ಅಧ್ಯಕ್ಷ ಶಿವಪ್ರಸಾದ್ ರೈ ಮಡ್ವ ಅಧ್ಯಕ್ಷತೆ ವಹಿಸಿದರು.
ದಕ್ಷಿಣ ವಲಯ ಅಧ್ಯಕ್ಷ ಸುಜಿತ್ ರೈ, ಕುಂಬಳೆ ಮಂಡಲ ಅಧ್ಯಕ್ಷ ಸುನಿಲ್ ಅನಂತಪುರ, ಮಂಡಲ ಕೋಶಾಧಿಕಾರಿ ರಾಧಾಕೃಷ್ಣ ರೈ, ವಿವಿಧ ವಾರ್ಡ್‌ಗಳಿಂದ ಸ್ಪರ್ಧಿಸುತ್ತಿರುವ ಬಿ. ವಿಕ್ರಂ ಪೈ, ಉಷಾ ಕುಮಾರಿ, ಕಾಂಚಾರ ಎ, ಚಂದ್ರಶೇಖರ, ದೇವಕಿ, ಕಾರ್ಯಕರ್ತರಾದ ವಿನೋದನ್, ಗೋಪಾಲ, ಸೋಮಪ್ಪ ಉಪಸ್ಥಿತರಿದ್ದರು. ಪಂ. ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಶೆಟ್ಟಿ ಸ್ವಾಗತಿಸಿ, ಜಿಲ್ಲಾ ಸಮಿತಿ ಸದಸ್ಯ ಕೆ. ರಮೇಶ್ ಭಟ್ ವಂದಿಸಿದರು.






