ಬದಿಯಡ್ಕ: ಬದಿಯಡ್ಕದಲ್ಲಿ ನಿನ್ನೆ ಸಂಜೆ ಜೀಪು-ಬೈಕ್ ಢಿಕ್ಕಿ ಹೊಡೆದು ಮಧೂರು ನಿವಾಸಿಯಾದ ಬಿಎಂಎಸ್ ಕಾರ್ಯಕರ್ತ ಯುವಕ ಮೃತಪಟ್ಟ ದಾರುಣ ಘಟನೆ ಸಂಭ ವಿಸಿದೆ. ಅಪಘಾತದಲ್ಲಿ ಇನ್ನೋರ್ವ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಮಧೂರು ಕೋಡಿಮಜಲು ನಿವಾಸಿ ದಿ| ಕೃಷ್ಣನ್ ಎಂಬವರ ಪುತ್ರ ವಿಜಯ ಕುಮಾರ್ ಯಾನೆ ಪಮ್ಮು (38) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇವರ ಸ್ನೇಹಿ ತನಾದ ನೀರ್ಚಾಲು ಮಧೂರು ನಿವಾಸಿಯಾದ ರಾಧಾಕೃಷ್ಣ ಎಂಬವರು ಗಾಯಗೊಂಡಿದ್ದು, ಅವರನ್ನು ಮಂಗ ಳೂರಿನ ಆಸ್ಪತ್ರೆಯಲ್ಲಿ ದಾಖಲಿ ಸಲಾಗಿದೆ. ನಿನ್ನೆ ಸಂಜೆ ೬.೩೦ಕ್ಕೆ ಬದಿಯಡ್ಕ ಬಳಿ ಬೋಳುಕಟ್ಟೆ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ವಿಜಯ ಕುಮಾರ್ ಹಾಗೂ ರಾಧಾಕೃಷ್ಣ ಸ್ನೇಹಿತನ ಮನೆಗೆ ತೆರಳಿ ಮರಳುತ್ತಿದ್ದಾಗ ಅವರು ಸಂಚರಿಸುತ್ತಿದ್ದ ಬೈಕ್ ಹಾಗೂ ಎದುರಿನಿಂದ ಬಂದ ಜೀಪು ಪರಸ್ಪರ ಢಿಕ್ಕಿ ಹೊಡೆದು ಅಪಘಾ ತವುಂಟಾಗಿದೆ. ಇದರಿಂದ ಗಾಯ ಗೊಂಡ ಈ ಇಬ್ಬರನ್ನು ಕೂಡಲೇ ಕಾಸರ ಗೋಡಿನ ಆಸ್ಪತ್ರೆಗೆ ತಲುಪಿಸಿ ಬಳಿಕ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯು ತ್ತಿದ್ದ ವೇಳೆ ವಿಜಯ ಕುಮಾರ್ ಮೃತಪಟ್ಟಿದ್ದಾರೆ. ಕಟ್ಟಡ ನಿರ್ಮಾಣ ಕಾರ್ಮಿಕನಾದ ವಿಜಯ ಕುಮಾರ್ ಬಿಎಂಎಸ್ ಕಾರ್ಯಕರ್ತನೂ, ಸಂಘಶಕ್ತಿ ಮಧೂರು, ಯುವಕೇಸರಿ ಮಧೂರು, ಮಿತ್ರ ಕಲಾವೃಂದ ಮಧೂರು ಎಂಬೀ ಕ್ಲಬ್‌ಗಳ ಸಕ್ರಿಯ ಸದಸ್ಯನಾಗಿ ದ್ದರು. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಇಂದು ಮರ ಣೋತ್ತರ ಪರೀಕ್ಷೆ ನಡೆಸಲಾಗುವುದು.
ಮೃತರು ತಾಯಿ ಶೀಲಾ, ಸಹೋದರಿಯರಾದ ಬಿಂದು, ಪ್ರಮೋದಿನಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಅಪಘಾತ ಬಗ್ಗೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂಡಿದ್ದು, ಜೀಪು ಚಾಲಕನನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.