ಜೋಡುಕಟ್ಟೆ- ಕಿದೂರು ಕ್ಷೇತ್ರ ರಸ್ತೆ ಶೋಚನೀಯ ಸ್ಥಿತಿಯಲ್ಲಿ: ಸಂಚಾರಕ್ಕೆ ಅಡಚಣೆ; ಜನಪ್ರತಿನಿಧಿಗಳು ನಾಡಿನ ಅಭಿವೃದ್ಧಿಗೆ ಗಮನ ಹರಿಸಬೇಕು- ನಾಗರಿಕರ ಒತ್ತಾಯ

ಕುಂಬಳೆ: ಕುಂಬಳೆ ಪಂಚಾಯತ್ ವ್ಯಾಪ್ತಿಯ ಕಿದೂರು ಜೋಡುಕಟ್ಟೆಯಿಂದ ಕಿದೂರು ಕ್ಷೇತ್ರಕ್ಕೆ ತೆರಳುವ ಎರಡು ಕಿಲೋ ಮೀಟರ್ ರಸ್ತೆ ಶೋಚನೀಯ ಸ್ಥಿತಿಯಲ್ಲಿದೆ. ಇದೇ ವೇಳೆ ಈ ರಸ್ತೆಯ ದುರಸ್ತಿಗೆ ಕ್ರಮ ಉಂಟಾಗದಿರುವುದು ಸಮಸ್ಯೆಗೆ ಕಾರಣವಾಗಿದೆ. ರಸ್ತೆಯ ಒಂದು ಭಾಗ 7ನೇ ವಾರ್ಡ್, ಮತ್ತೊಂದು ಭಾಗ ೮ನೇ ವಾರ್ಡ್ ವ್ಯಾಪ್ತಿಯಲ್ಲಿದೆ. ಇದರಿಂದ 7ನೇ ವಾರ್ಡ್ ಸದಸ್ಯ ಈ ರಸ್ತೆ ೮ನೇ ವಾರ್ಡ್ ನಲ್ಲಿದೆಯೆಂದೂ, ೮ನೇ ವಾರ್ಡ್ ಸದಸ್ಯ ರಸ್ತೆ ೭ನೇ ವಾರ್ಡ್ ನಲ್ಲಿದೆಯೆಂದು ತಿಳಿಸುತ್ತಿದ್ದು ಇದರಿಂದ ರಸ್ತೆಯ ಅಭಿವೃದ್ಧಿಗೆ ಯಾರಿಂದಲೂ ಕ್ರಮ ಉಂ ಟಾಗುತ್ತಿಲ್ಲವೆಂದು ನಾಗರಿಕರು  ಹೇಳುತ್ತಿದ್ದಾರೆ. ಇದರಿಂದ ಪಂಚಾಯತ್ ಅಧಿಕಾರಿಗಳಲ್ಲಿ ನಾಗರಿಕರು ವಿಚಾರಿಸಿದಾಗ ಅವರು ನೌಕರರೊಂದಿಗೆ ವಿಚಾರಿಸುವಂತೆ ತಿಳಿಸುತ್ತಿ ದ್ದಾರೆನ್ನಲಾಗಿದೆ.

20 ವರ್ಷಗಳ ಹಿಂದೆ ನಿರ್ಮಾಣಗೊಂಡ ಈ ರಸ್ತೆಯ ಅಭಿವೃದ್ಧಿಗೆ ಜನಪ್ರತಿ ನಿಧಿಗಳಿಂದಲೋ, ಅಧಿಕಾರಿ ಗಳಿಂದಲೋ ಕ್ರಮ ಉಂಟಾಗದಿರುವುದೇ ರಸ್ತೆ ಶೋಚನೀಯ ಸ್ಥಿತಿಗೆ ತಲುಪಲು ಕಾರಣವಾಗಿದೆ. ರಸ್ತೆಯಲ್ಲಿ ವಿವಿಧೆಡೆ ಭಾರೀ ಆಳದ ಹೊಂಡಗಳು ಸೃಷ್ಟಿಯಾಗಿದ್ದು, ಅದರಲ್ಲಿ ಮಳೆ ನೀರು ತುಂಬಿಕೊಂಡಿದೆ. ಇದರಿಂದ ವಾಹನ ಸಂಚಾರಕ್ಕೆ ಅಸಾಧ್ಯವಾಗಿದೆ. ಈ ಕಾರಣದಿಂದ ತುರ್ತು ಸಂದರ್ಭದಲ್ಲಿ ಆಟೋರಿಕ್ಷಾಗಳಿಗೂ ಬಾಡಿಗೆಗೆ ತೆರಳಲು ಸಾಧ್ಯವಾಗುತ್ತಿಲ್ಲ. ಇದರಿಂದ ರೋಗಿಗಳನ್ನು, ವಯಸ್ಕರನ್ನು ಆಸ್ಪತ್ರೆಗೆ ತಲುಪಿಸಲು ಸಾಧ್ಯವಾಗದ ಸ್ಥಿತಿ ಉಂಟಾಗಿದೆ.

ಕಿದೂರಿನಲ್ಲಿ ಎಲ್‌ಪಿ ಶಾಲೆಯೊಂದು ಕಾರ್ಯಾಚರಿ ಸುತ್ತಿದ್ದು, ಅಲ್ಲಿಗೆ ತೆರಳುವ ಮಕ್ಕಳಿಗೂ ಈ ರಸ್ತೆಯಲ್ಲಿ ನಡೆದು ಹೋಗಲಾಗದ ಸ್ಥಿತಿ ಉಂಟಾಗಿದೆ. ದ್ವಿಚಕ್ರ ವಾಹನ ಗಳಿಗೂ ಸಂಚರಿಸಲು ಸಾಧ್ಯವಾಗದಷ್ಟು ಶೋಚನೀಯ ಸ್ಥಿತಿಗೆ ಈ ರಸ್ತೆ ತಲುಪಿದೆ ಎಂದು ನಾಗರಿಕರು ಹೇಳುತ್ತಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ನಾಡಿನಲ್ಲಿ  ಸುಗಮ ವಾಹನ ಸಂಚಾರಕ್ಕೆ  ಯೋಗ್ಯ ರಸ್ತೆಯನ್ನು ನಿರ್ಮಿಸಿಕೊಡಬೇಕೆಂದು ನಾಗರಿಕರು ಒತ್ತಾಯಿಸುತ್ತಿದ್ದಾರೆ.

RELATED NEWS

You cannot copy contents of this page