ಕಾಸರಗೋಡು: ಭಾರತದ ಅತ್ಯಂತ ದೊಡ್ಡ ಸರ್ಕಸ್ ಆದ ಜಂಬೋ ಸರ್ಕಸ್ ಕಾಸರಗೋಡು ಹೊಸ ಬಸ್ ನಿಲ್ದಾಣದ ಮುಂಭಾಗ, ನುಳ್ಳಿಪ್ಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರ ಸಮೀಪ ಆರಂಭಗೊಂಡಿದೆ. 1೦ ವರ್ಷದ ಬಳಿಕ ಜಂಬೋ ಸರ್ಕಸ್ ಕಾಸರಗೋಡಿಗೆ ತಲುಪುತ್ತಿದೆ. ಆಶ್ಚರ್ಯಕರವಾದ ಅಭ್ಯಾಸ ಪ್ರದರ್ಶನಗಳು, ತಾನ್ಸಾನಿಯ, ಎತ್ಯೋಪ್ಯ ಮೊದಲಾದ ರಾಜ್ಯಗಳಿಂದಿರುವ ತರಬೇತಿ ಪಡೆದ ವಿದೇಶ ಕಲಾವಿದರು, ಮಣಿಪುರ ಸಹಿತ ಭಾರತದ ವಿವಿಧ ರಾಜ್ಯಗಳ ನೂರಾರು ಕಲಾವಿದರು ಪ್ರದರ್ಶನ ನೀಡುತ್ತಿದ್ದಾರೆ. ೨ ಗಂಟೆಯ ಶೋದಲ್ಲಿ ೩೦ಕ್ಕೂ ಹೆಚ್ಚು ವಿಸ್ಮಯ ಪ್ರದರ್ಶನಗಳಿವೆ. ಮೆಕ್ಸಿಕನ್ ವೀಲ್ ಆಫ್ ಡೆತ್, ರೋಮೆಂಟಿಕ್ ಸಾರಿ ಬ್ಯಾಲೆನ್ಸಿಂಗ್, ಅಕ್ರೋಬ್ಯಾಟಿಕ್ ಚೆಯರ್ ಬ್ಯಾಲೆನ್ಸಿಂಗ್, ಡೆಂಟಲ್ ಎರಿಯಲ್ ಆಕ್ಟ್, ಆಫ್ರಿಕನ್ ಫ್ರೋಗ್ ಆಕ್ಟ್, ಸ್ಟಿಕ್ ಬ್ಯಾಲೆನ್ಸ್, ಕಾಡು ಪ್ರಾಣಿಗಳು ಮೊದಲಾದವುಗಳು ಸರ್ಕಸ್‌ನ ಪ್ರತ್ಯೇಕತೆಗಳಾಗಿವೆ. ಮಧ್ಯಾಹ್ನ ೧ ಗಂಟೆಗೆ, ಸಂಜೆ ೪, ರಾತ್ರಿ ೭ ಗಂಟೆಗೆ ಪ್ರದರ್ಶನವಿರುತ್ತದೆ. ಈ ಬಗ್ಗೆ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮೆನೇಜರ್‌ಗಳಾದ ರಾಜೀವನ್ ಕೆ.ಪಿ, ಪ್ರಮೋದ್‌ಚಂದ್, ಮಹೇಶ್ ಮರೋಳಿ, ಕಲಾವಿದರಾದ ಆಂಟನಿ, ವಸೀಂ ಅಹಮ್ಮದ್, ರಿಯಾನ ಭಾಗವಹಿಸಿದರು







