ಡಾ. ಕೆ. ಗಣಪತಿ ಭಟ್‌ರಿಗೆ ಕ.ಸಾ.ಪ.ದಿಂದ ಗೌರವಾರ್ಪಣೆ

ಕಾಸರಗೋಡು: ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ಪರಿಷತ್‌ನ ನಡಿಗೆ ಹಿರಿಯ ಸಾಧಕರ ಕಡೆಗೆ ಎಂಬ ಕಾರ್ಯಕ್ರಮದಂಗವಾಗಿ ಪ್ರಸಿದ್ಧ ದಂತವೈದ್ಯ ಡಾ. ಕುಳಮರ್ವ ಗಣಪತಿ ಭಟ್‌ರನ್ನು ಅವರ ನಿವಾಸದಲ್ಲಿ ಅಭಿನಂದಿಸಲಾಯಿತು. ಕ.ಸಾ.ಪ. ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಡಾ. ಕೆ. ಗಣಪತಿ ಭಟ್- ದೇವಕಿ ಭಟ್ ದಂಪತಿಯನ್ನು ಗೌರವಿಸಿದರು. ಈ ವೇಳೆ ವೈ.ಕೆ. ಗೋವಿಂದ ಭಟ್ ಅಭಿನಂದನಾ ಭಾಷಣ ಮಾಡಿದರು. ‘ಬಿಚ್ಚಿಟ್ಟ ನನ್ನ ಬದುಕು’ ಕೃತಿಯ ಮೂಲಕ ಓರ್ವ ಉತ್ತಮ ಬರಹಗಾರ ಎಂಬುದನ್ನು ಡಾ. ಗಣಪತಿ ಭಟ್ ಸಾಬೀತು ಪಡಿಸಿದ್ದಾರೆ ಎಂದು ಗೋವಿಂದ ಭಟ್ ಹೇಳಿದರು. ಗಮಕ ಕಲಾ ಪರಿಷತ್ ಗಡಿನಾಡ ಘಟಕದ ಅಧ್ಯಕ್ಷ ತೆಕ್ಕೇಕರೆ ಶಂಕರನಾರಾಯಣ ಭಟ್, ಜಯನಾರಾಯಣ ತಾಯನ್ನೂರು, ಗಣೇಶ್ ಪ್ರಸಾದ್ ಪಾಣೂರು, ಡಾ. ವೆಂಕಟಗಿರಿ, ಗುರುಪ್ರಸಾದ್ ಕೋಟೆಕಣಿ ಮಾತನಾಡಿದರು. ದೇವದಾಸ ಕಾಸರಗೋಡು, ರಮೇಶ್ ಏತಡ್ಕ, ಸುಜಾತ, ಪ್ರೇಮಶರಧಿ ಉಪಸ್ಥಿತರಿದ್ದರು. ಡಾ. ಗಣಪತಿ ಭಟ್ ಕೃತಜ್ಞತೆ ಸಲ್ಲಿಸಿ ಮಾತನಾಡಿದರು.

ಕ.ಸಾ.ಪ ಗಡಿನಾಡ ಘಟಕ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಸ್ವಾಗತಿಸಿ, ಗೌರವ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಬೇಳ ವಂದಿಸಿದರು.

You cannot copy contents of this page