ಕಾಸರಗೋಡು: ಪೆರಿಯ ಕಲ್ಯೋಟ್ ಅವಳಿ ಕೊಲೆ ಪ್ರಕರಣದಲ್ಲಿ ಅವಳಿ ಜೀವಾವಧಿ ಶಿಕ್ಷೆ ಲಭಿಸಿದ ನಾಲ್ಕನೇ ಆರೋಪಿಗೆ 1 ತಿಂಗಳ ಪರೋಲ್ ಮಂಜೂರು ಮಾಡಲಾಗಿದೆ. ಪೆರಿಯ ಏಚಿಲಡ್ಕ ನಿವಾಸಿ ಅನಿಲ್ ಕುಮಾರ್‌ಗೆ ಪರೋಲ್ ಮಂಜೂರು ಮಾಡಲಾಗಿದೆ. ಆಗಸ್ಟ್ 18ರಿಂದ 30 ದಿನಕ್ಕೆ ಪರೋಲ್ ಅನ್ವಯವಾಗುವುದು. ಅನಿಲ್ ಕುಮಾರ್ ಜೈಲಿನಿಂದ ಹೊರಗೆ ಬಂದಿದ್ದಾನೆ. ಅಂಬಲತ್ತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸಬೇಕೆಂದು ಪ್ರತೀ ದಿನ ಬೆಳಿಗ್ಗೆ ಇನ್ಸ್‌ಪೆಕ್ಟರ್‌ರ ಮುಂದೆ ಹಾಜರಾಗಿ ಸಹಿ ಹಾಕಬೇಕೆಂಬ ವ್ಯವಸ್ಥೆಯಲ್ಲಿ ಪರೋಲ್ ಮಂಜೂರು ಮಾಡಲಾಗಿದೆ.
ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಗೆ ಪ್ರವೇಶಿಸಬಾರದೆಂದು ನಿರ್ದೇಶಿಸಲಾಗಿದೆ. ೨೦೧೯ ಫೆಬ್ರವರಿ ೧೭ರಂದು ರಾತ್ರಿ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್, ಶರತ್‌ಲಾಲ್‌ರನ್ನು ಇರಿದು ಕೊಲೆಗೈಯ್ಯಲಾಗಿತ್ತು. ಈ ಪ್ರಕರಣದಲ್ಲಿ ೧ರಿಂದ ೧೦ರವರೆಗಿನ ಆರೋಪಿಗಳಿಗೆ ಅವಳಿ ಜೀವಾವಧಿ ಸಜೆ ಸಿಬಿಐ ನ್ಯಾಯಾಲಯ ಘೋಷಿಸಿತ್ತು.