ಕುಂಬಳೆ: ವಾರ್ಷಿಕ ಜಾತ್ರಾ ಮಹೋತ್ಸವ ನಡೆಯುತ್ತಿರುವ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ನಾಡಿನ ವಿವಿಧ ಭಾಗಗಳಿಂದ ಸಹಸ್ರಾರು ಮಂದಿ ಭಕ್ತಾದಿಗಳು ತಲುಪಿ ದೇವರ ದರ್ಶನ ಪಡೆಯುತ್ತಿದ್ದಾರೆ. ಮಹೋತ್ಸವದ ಮೂರನೇ ದಿನವಾದ ಇಂದು ಬೆಳಿಗ್ಗೆ ಉತ್ಸವ ಶ್ರೀಬಲಿ, ಬಳಿಕ ತುಲಾಭಾರ ಸೇವೆ ನಡೆಯಿತು. ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಶ್ರೀ ಬಲಿ ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ. ಅಪರಾಹ್ನ ಗಂಟೆ ೨ರಿಂದ ಶೇಡಿಕಾವು ಪಾರ್ತಿಸುಬ್ಬ ಯಕ್ಷಗಾನ ಕಲಾಸಂಘದವರಿಂದ ‘ಶ್ರೀಕೃಷ್ಣ ಸಂದಾನ’ ಯಕ್ಷಗಾನ ತಾಳಮದ್ದಳೆ, ಸಂಜೆ 4.30ರಿಂದ ವೈಷ್ಣವಿ ನಾಟ್ಯಾಲಯ ಪುತ್ತೂರು ಇದರ ನೃತ್ಯ ನಿರ್ದೇಶಕಿ ವಿದುಷಿ ಯೋಗೀಶ್ವರಿ ಜಯಪ್ರಕಾಶರ ಶಿಷ್ಯೆ ವಿದುಶಿ ಹರ್ಷಿತಾ ಬದಿಯಡ್ಕ ಇವರ ಕುಂಬಳೆ ಶಾಖೆ ವಿದ್ಯಾರ್ಥಿಗಳಿಂದ ‘ರಜತ ನೃತ್ಯ ಯಾನ’, ೫ರಿಂದ ಆರಿಕ್ಕಾಡಿ ಶ್ರೀ ಭಗವತೀ ಆಲಿ ಚಾಮುಂಡಿ ಮಹಿಳಾ ಸಂಘದವರಿಂದ ಭಜನೆ, 6.30ಕ್ಕೆ ವಿಶ್ವರೂಪ ದರ್ಶನ, ರಾತ್ರಿ 7.30ರಿಂದ ಪೂಜೆ, ನಡುದೀಪೋತ್ಸವ, ಶ್ರೀಬಲಿ ನಡೆಯಲಿದೆ.
ನಾಳೆ ಬೆಳಿಗ್ಗೆ 6ರಿಂದ ಉತ್ಸವ ಶ್ರೀಬಲಿ, 10.30ರಿಂದ ತುಲಾಭಾರ ಸೇವೆ, ಮಧ್ಯಾಹ್ನ 2.30ಕ್ಕೆ ಮಹಾಪೂಜೆ, ಅನ್ನ ಸಂತರ್ಪಣೆ, ಸಂಜೆ 4.30ರಿಂದ ವಿದುಷಿ ಡಾ. ವಿದ್ಯಾಲಕ್ಷ್ಮಿ ನಾಟ್ಯ ವಿದ್ಯಾನಿಲಯ ಕುಂಬಳೆ ಇವರ ಶಿಷ್ಯವೃಂದದಿಂದ ನೃತ್ಯ ಸಂಭ್ರಮ, ೬ರಿಂದ ತಾಯಂಬಕ, 6.30ಕ್ಕೆ ದೀಪಾರಾಧನೆ, ರಾತ್ರಿ 7.30ರಿಂದ ಪೂಜೆ, ಶ್ರೀ ಭೂತಬಲಿ ಉತ್ಸವ, 9.45ರಿಂದ ವಿಶೇಷ ಬೆಡಿ ಪ್ರದರ್ಶನ ಬಳಿಕ ಉತ್ಸವ ಬಲಿ, ಶಯನ, ಕವಾಟ ಬಂಧನ ನಡೆಯಲಿದೆ.
ಕುಂಬಳೆ ಚಿರಂಜೀವಿ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ನವರಿಂದ ವಯಲಿನ್ ಫ್ಯೂಶನ್, ಮೆಗಾ ಮ್ಯೂಸಿಕಲ್ ನೈಟ್ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಇಂದು ಹಾಗೂ ನಾಳೆ ನಡೆಯಲಿದೆ. ವಯಲಿನ್ ವಾದನದಲ್ಲಿ ವರ್ಲ್ಡ್ ರೆಕಾರ್ಡ್ ಗಳಿಸಿದ ಗಾಯತ್ರಿ ಆಚಾರ್ಯ, ಶ್ರಾವಣ್ಯ ಆಚಾರ್ಯ ಎಂಬಿವರ ವಯಲಿನ್ ವಾದನ ಇಂದು ಸಂಜೆ 6 ಗಂಟೆಗೆ ನಡೆಯಲಿದೆ. ಕಾರ್ಯಕ್ರಮವನ್ನು ನ್ಯಾಯವಾದಿ ಸುಬ್ಬಯ್ಯ ರೈ ಇಚ್ಚಿಲಂಪಾಡಿ ಉದ್ಘಾಟಿಸುವರು. ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ, ಮಾಣಿಲ ಶ್ರೀಧಾಮದ ಮೋಹನ್ದಾಸ ಪರಮಹಂಸ ಸ್ವಾಮೀಜಿ, ಚಕ್ರಪಾಣಿ ದೇವ ಪೂಜಿತ್ತಾಯ ಮುಖ್ಯ ಅತಿಥಿಗಳಾಗಿರುವರು. ವಿವಿಧ ರಂಗಗಳಲ್ಲಿ ಸಾಧನೆಗೈದ ಡಾ. ಕನ್ಯಾನ ಸದಾಶಿವ ಶೆಟ್ಟಿ ಕುಳೂರು, ಕೆ.ಕೆ. ಶೆಟ್ಟಿ ಅಹಮ್ಮದ್ನಗರ, ಪದ್ಮಶ್ರೀ ಸತ್ಯನಾರಾಯಣ ಬೆಳೇರಿ, ಡಿವೈಎಸ್ಪಿ ಡಾ. ವಿ. ಬಾಲಕೃಷ್ಣನ್, ಡಾ. ಸರ್ವೇಶ್ವರ ಭಟ್ ಕುಂಬಳೆ, ಡಾ. ಜ್ಯೋತಿ ಡಿ., ಡಿ. ವಸಂತ ಪೈ ಬದಿಯಡ್ಕ, ಎಂ.ಎಸ್. ಮೊಹಮ್ಮದ್ ಕುಂಞಿ ಮೊಗ್ರಾಲ್ ಎಂಬಿವರನ್ನು ಗೌರವಿಸಲಾಗುವುದು. ಡಾ. ಹರಿಕಿರಣ್ ಟಿ. ಬಂಗೇರ, ಡಾ. ಕಿಶೋರ್ ಕುಮಾರ್ ಬಿ. ಕುಂಬಳೆ, ಡಾ. ಶಾಂಭವಿ ಕಿಶೋರ್ ಕುಂಬಳೆ, ಡಾ. ಮಮತಾ ಪಿ. ಶೆಟ್ಟಿ, ರಘುನಾಥ ಪೈ ಕುಂಬಳೆ, ಜಯಕುಮಾರ್ ಕುಂಬಳೆ, ಗೋಪಾಲ್ ಅರಿಕ್ಕಾಡಿ, ನಾರಾಯಣ ಪ್ರಭು, ಕೆ.ವಿ. ಶಿವರಾಮನ್, ಬಿ. ತಿಮ್ಮಪ್ಪ ಆಳ್ವ, ಮಂಜುನಾಥ ಆಳ್ವ, ಶಿವಶಂಕರ ನೆಕ್ರಾಜೆ, ಕೆ.ಸಿ. ಮೋಹನನ್ ಎಂಬಿವರು ಉಪಸ್ಥಿತರಿರುವವರು. ಎಂ.ನಾ. ಚಂಬಲ್ತಿಮಾರ್ ಅಧ್ಯಕ್ಷತೆ ವಹಿಸುವರು. ಚಿರಂಜೀವಿ ಕಾರ್ಯದರ್ಶಿ ಪ್ರಜೇಶ್ ಸ್ವಾಗತಿಸುವರು. ನಾಳೆ ಸಂಜೆ ನಡೆಯುವ ಮ್ಯೂಸಿಕಲ್ ನೈಟ್ನಲ್ಲಿ ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್, ಸಂಸದ ರಾಜ್ಮೋಹನ್ ಉಣ್ಣಿತ್ತಾನ್, ಶಾಸಕರಾದ ಎ.ಕೆ.ಎಂ. ಅಶ್ರಫ್, ಎನ್.ಎ. ನೆಲ್ಲಿಕುನ್ನು, ಸಿ.ಎಚ್. ಕುಂಞಂಬು, ರಾಜಗೋಪಾಲ್, ಎಂ.ಎಲ್. ಅಶ್ವಿನಿ ಮೊದಲಾದವರು ಉಪಸ್ಥಿತರಿರುವರೆಂದು ಕೃಷ್ಣ ಕುಂಬಳೆ, ಪ್ರಜೇಶ್ ಪೆರ್ವಾಡ್ ತಿಳಿಸಿದ್ದಾರೆ.







