ಕಾಸರಗೋಡು: ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರಕಾರ, ಭಾರತ್ ಭವನ್ ತಿರುವನಂತಪುರ ಕೇರಳ ಸರಕಾರ ಇದರ ಆಶ್ರಯದಲ್ಲಿ ಅನಂತಪುರಿ ಗಡಿನಾಡ ಕನ್ನಡ ಸಂಸ್ಕೃತಿ ಉತ್ಸವ ಹಾಗೂ ಕೃತಿ ಬಿಡುಗಡೆ ಈ ತಿಂಗಳ 23ರಂದು ಬೆಳಿಗ್ಗೆ 9ರಿಂದ ತಿರುವನಂತಪುರ ತೈಕಾಡ್ ಪೌಂಡ್ ಕಾಲನಿ ಸಿ.ವಿ. ರಾಮನ್ ಪಿಳ್ಳೆ ರಸ್ತೆಯಲ್ಲಿರುವ ಭಾರತ್ ಭವನದಲ್ಲಿ ನಡೆಯಲಿದೆ. 9ರಿಂದ ಸಾಂಸ್ಕೃತಿಕ ಕಾರ್ಯಕ್ರಮ, 10ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಜಿ.ಆರ್. ಅನಿಲ್ ಉದ್ಘಾಟಿಸುವರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ ಪ್ರಸ್ತಾಪಿಸುವರು. ಗ.ಸಾ.ಸಾ ಅಕಾಡೆಮಿ ಸಂಸ್ಥಾಪಕ ಎಸ್. ಪ್ರದೀಪ್ ಕುಮಾರ್ ಕಲ್ಕೂರ, ವಿವಿಧ ರಂಗಗಳಲ್ಲಿ ಸಾಧನೆಗೈದ ಜೇಮ್ಸ್ ಮೆಂಡೋನ್ಸಾ ದುಬೈ, ಶಿವರಾಮ ಭಂಡಾರಿ ಮುಂಬೈ, ಕಿಶೋರ್ ಡಿ ಶೆಟ್ಟಿ ಮಂಗಳೂರು, ಎಲ್.ಆರ್. ಪೋತಿ ತಿರುವನಂತಪುರ, ರಾಘವ ಚೇರಾಲ್ ಕಾಸರಗೋಡು, ಶಿವಾನಂದ ಕೋಟ್ಯಾನ್ ಮಸ್ಕತ್ ಇವರನ್ನು ಗೌರವಿಸುವರು. ಮುಖ್ಯ ಅತಿಥಿಗಳಾಗಿ ಭಾರತ್ ಭವನ್ ಸದಸ್ಯ ಕಾರ್ಯದರ್ಶಿ ಪ್ರಮೋದ್ ಪಯ್ಯನ್ನೂರು, ಹಿರಿಯ ವಿದ್ವಾಂಸ ವೀರಣ್ಣ ತುಪ್ಪದ, ಹನುಮಂತ ಬೆನ್ನೂರ, ಡಾ. ಎಂ.ಎಸ್. ಮದಬಾವಿ, ಅಶೋಕ ಚಂದರಗಿ, ಶಿವರೆಡ್ಡಿ ಖ್ಯಾಡೇದ, ಡಾ. ರುಕ್ಮಿಣಿ ಕೆ, ಡಾ. ಅನಿತಾ ಕುಮಾರಿ ಹೆಗ್ಡೆ, ಅರಿಬೈಲು ಗೋಪಾಲ ಶೆಟ್ಟಿ ಕಾಸರಗೋಡು, ಮಂಜುನಾಥ ಆಳ್ವ ಮಡ್ವ, ಗಣೇಶ್ ಪ್ರಸಾದ್ ಪಾಣೂರು, ಸೂರ್ಯ ನಾರಾಯಣ ಕುಂಜುರಾಯರ್ ಭಾಗವಹಿ ಸುವರು. ಗಡಿನಾಡ ಸಾಹಿತ್ಯ,ಸಾಂಸ್ಕೃತಿಕ ಅಧ್ಯಕ್ಷ ಎನ್. ಚನಿಯಪ್ಪ ನಾಯ್ಕ, ಲೇಖಕ ರವಿ ನಾಯ್ಕಾಪು, ಅಖಿಲೇಶ್ ನಗುಮುಗಂ ಭಾಗವಹಿಸುವರು.
ಮಧ್ಯಾಹ್ನ 12 ಗಂಟೆಗೆ ಬಹು ಭಾಷಾ ಕವಿ ಸಂಗಮ ನಡೆಯಲಿದ್ದು, ರಾಧಾಕೃಷ್ಣ ಕೆ ಉಳಿಯತ್ತಡ್ಕ ಅಧ್ಯಕ್ಷತೆ ವಹಿಸುವರು. ಗಂಗಾಧರ ತೆಕ್ಕೇಮೂಲೆ, ನ್ಯಾ. ಎಂ.ಎಸ್. ಥೋಮಸ್ ಡಿ’ಸೋಜಾ, ಶ್ರೀಕಾಂತ್ ನೆಟ್ಟಣಿಗೆ ಭಾಗವಹಿಸುವರು. ಕನ್ನಡ, ಮಲೆಯಾಳ, ತುಳು, ಹಿಂದಿ, ಸಂಸ್ಕೃತ, ತಮಿಳು, ಇಂಗ್ಲಿಷ್, ತೆಲುಗು, ಕೊಂಕಣಿ, ಬ್ಯಾರಿ, ಉರ್ದು, ಕರಾಡ, ಹವ್ಯಕ ಭಾಷೆಯ ಕವಿಗಳು ಭಾಗವಹಿಸುವರು. ಮಧ್ಯಾಹ್ನ 1ರಿಂದ ಜನಪದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು, 2ರಿಂದ ‘ಬಹುಭಾಷಾ ಸಮಾಜದಲ್ಲಿ ಸಹಬಾಳ್ವೆ ಮತ್ತು ಸಂವಹನ’ ವಿಷಯದಲ್ಲಿ ವಿಚಾರಗೋಷ್ಠಿ ನಡೆಯಲಿದ್ದು ಸಾಹಿತಿ ಡಾ. ಮೀನಾಕ್ಷಿ ರಾಮಚಂದ್ರ ಅಧ್ಯಕ್ಷತೆ ವಹಿಸುವರು. ನಿವೃತ್ತ ಪ್ರಾಂಶುಪಾಲ ಪ್ರೊ. ಎ ಶ್ರೀನಾಥ್, ಅನಿರುದ್ಧನ್ ನೀಲಾಮೇಲ್, ಉದಿನೂರು ಮುಹಮ್ಮದ್ ಕುಂಞಿ ವಿಷಯ ಮಂಡಿಸುವರು. ಪುರುಷೋತ್ತಮ ಪೆರ್ಲ, ಶ್ಯಾಂ ಪ್ರಸಾದ್ ಸರಳಿ, ಪೃಥ್ವೀರಾಜ್ ಶೆಟ್ಟಿ ಕುಂಬಳೆ ಭಾಗವಹಿಸುವರು. ಅಪರಾಹ್ನ ೩ರಿಂದ ಸಮಾರೋಪ ಸಮಾರಂಭ ಜರಗಲಿದ್ದು, ಸೋಮಣ್ಣ ಬೇವಿನ ಮರದ ಅಧ್ಯಕ್ಷತೆ ವಹಿಸುವರು. ಎಸ್. ಪ್ರದೀಪ್ ಕುಮಾರ್ ಕಲ್ಕೂರ ಪ್ರಸ್ತಾಪಿಸುವರು. ಶಿಕ್ಷಣ ಸಚಿವ ಕೆ. ಶಿವನ್ ಕುಟ್ಟಿ ಶಿವಾನಂದ ಕೋಟ್ಯಾನ್ ಕಟಪ್ಪಾಡಿಯವರ ಕೃತಿ ಬಿಡುಗಡೆ ಗೊಳಿಸುವರು. ಶಾಸಕರಾದ ಎನ್.ಎ. ನೆಲ್ಲಿಕುನ್ನು, ಎಕೆಎಂ ಅಶ್ರಫ್, ಜಾಣಗೆರೆ ವೆಂಕಟರಾಮಯ್ಯ, ಭಗತ್ ರಾಜ್ ನಿಜಾಮಕರಿ, ಡಾ. ಸಂಜೀವ್ ಕುಮಾರ್ ಅತಿವಾಲೆ, ಭಾನುಮತಿ ಶೆಟ್ಟಿ, ಡಾ. ಮಲ್ಲಿಕಾರ್ಜುನ ಎಸ್. ನಾಸಿ, ಡಾ. ಇಬ್ರಾಹಿಂ ಬಾತಿಸ್ ಕೆ, ಶ್ರೀಧರ ಶೆಟ್ಟಿ ಮುಟ್ಟಂ,ಕೆಜಿಕೆ ಕಿಶೋರ್, ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್, ಸರೀನ್ ಮೊಹಮ್ಮದ್ ಅತಿಥಿಗಳಾಗಿ ಭಾಗವಹಿಸುವರು.
ಗಡಿನಾಡ ಸಾಂಸ್ಕೃತಿಕ ಉತ್ಸವ ಸಮಿತಿ ಪ್ರಧಾನ ಸಂಚಾಲಕ ಎ.ಆರ್. ಸುಬ್ಬಯ್ಯಕಟ್ಟೆ, ಝೆಡ್.ಎ ಕಯ್ಯಾರು, ರವಿ ನಾಯ್ಕಾಪು ಭಾಗವಹಿಸುವರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವೀರಗಾಸೆ, ಚಿಲಿಪಿಲಿ ಕುಣಿತ, ಜಾನಪದ ನೃತ್ಯ, ಶಾಸ್ತ್ರೀಯ ನೃತ್ಯ, ಕಥಕ್ ನೃತ್ಯ, ಮೋಹನಿಯಾಟ್ಟಂ, ಭರತನಾಟ್ಯ, ಯಕ್ಷಗಾನ, ಕಥಕ್ಕಳಿ ಪ್ರದರ್ಶನಗೊಳ್ಳಲಿದೆ.