ಕನ್ನಡ-ಮಲಯಾಳ ನಿಘಂಟು ಪ್ರಕಾಶನ

ಕಾಸರಗೋಡು: ಬಿ.ಟಿ. ಜಯರಾಮ್ ರಚಿಸಿ ಕೇರಳ ಭಾಷಾ ಇನ್‌ಸ್ಟಿಟ್ಯೂಟ್ ಪ್ರಕಟಿಸಿದ ಕನ್ನಡ-ಮಲಯಾಳ ನಿಘಂಟನ್ನು ನಿನ್ನೆ ಕಾಸರಗೋಡು ಮುನಿಸಿಪಲ್ ಕಾನ್ಫರೆನ್ಸ್ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ತುಳು ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕ್ಕಾಡ್  ಪ್ರಕಾಶನಗೈದು ಉದ್ಘಾಟನೆ ನೆರವೇರಿಸಿದರು.

ಸರಕಾರದ ವಿವಿಧ ಇಲಾಖೆಗಳಲ್ಲಿ ದೀರ್ಘ ಕಾಲ ಸೇವೆ ಸಲ್ಲಿಸಿರುವ ಬಿ,ಟಿ. ಜಯರಾಮ್ ಈ ನಿಘಂಟು ರಚನೆಗಾಗಿ ಸತತ ಆರು ವರ್ಷ ಕಠಿಣ ಪರಿಶ್ರಮ ನಡೆಸಿದ್ದಾರೆ. ಕನ್ನಡ ಪದಗಳ ಉಚ್ಛರಣೆಯನ್ನು ಹೇಗೆ ನಡೆಸಬೇ ಕೆನ್ನುವುದನ್ನು ಮಲೆಯಾಳ ಲಿಪಿಯಲ್ಲೇ ಈ ನಿಘಂಟಿನಲ್ಲಿ ನೀಡಲಾಗಿದೆ.

ಇದರ ಹೊರತಾಗಿ ಪ್ರತೀ ಕನ್ನಡ ವಾಕ್ಯಗಳ ವಿವಿಧ ಅರ್ಥಗಳನ್ನು ಮಲಯಾಳಿಗರಿಗೆ ಮನದಟ್ಟು ಮಾಡುವ ರೀತಿಯಲ್ಲಿ ಇದರಲ್ಲಿ ಅಳವಡಿಸಲಾಗಿದೆ. ಕಾಸರಗೋಡಿನವರಿಗಾಗಿ  ಊರ ಭಾಷಾ ಶೈಲಿಯಲ್ಲಿ ಪ್ರತೀ ಶಬ್ದಗಳನ್ನು ಭಾಷಾಂತರಿಸಲಾಗಿದೆ. ನಿಘಂಟನ್ನು ಶಾಸಕ ಇ. ಚಂದ್ರಶೇಖರನ್ ಪಡೆದುಕೊಂಡರು.ಶಾಸಕ ಎನ್.ಎ ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದರು. ಕೇರಳ ಭಾಷಾ ಇನ್‌ಸ್ಟಿಟ್ಯೂಟ್ ನಿರ್ದೇಶಕ ಎಂ. ಸತ್ಯನ್, ಖ್ಯಾತ ಬರಹಗಾರ್ತಿ ಹಾಗೂ ಅನುವಾದಕಿ ಡಾ. ಮೀನಾಕ್ಷಿ ರಾಮಚಂದ್ರ, ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ, ಕೇಂದ್ರ ಕೇರಳ ಸಾಹಿತ್ಯ ಅಕಾಡೆಮಿ ಪುರಸ್ಕಾರ ವಿಜೇತ ಕೆ.ವಿ. ಕುಮಾರನ್, ಕೇರಳ ಭಾಷಾ ಇನ್‌ಸ್ಟಿಟ್ಯೂಟ್‌ನ ರಿಸರ್ಚ್ ಆಫೀಸರ್‌ಗಳಾದ ಕೆ.ಆರ್. ಸರಿತ ಕುಮಾರಿ ಮತ್ತು ರಾಫಿ ಪೂಕೋಂ ಮೊದಲಾದವರು ಮಾತನಾಡಿದರು.

RELATED NEWS

You cannot copy contents of this page