ಕಾಸರಗೋಡು: ಕನ್ನಡ ಸಂಘ ಕೊಚ್ಚಿನ್ ಇದರ ವಾರ್ಷಿಕ ಮಹಾಸಭೆ ಕೊಚ್ಚಿಯಲ್ಲಿ ಜರಗಿತು. ಸಂಘದ ಕಾರ್ಯದರ್ಶಿ ವಜ್ರಾಂಗ ವರದಿ ವಾಚಿಸಿದರು. ಕೋಶಾಧಿಕಾರಿ ವಿಷ್ಣು ತಂತ್ರಿ ಲೆಕ್ಕಪತ್ರ ಮಂಡಿಸಿದರು. ಶ್ರೀಕಾಂತ ಅನವಟ್ಟಿ ಉತ್ಸವದ ಖರ್ಚುವೆಚ್ಚಗಳ ವರದಿ ವಾಚಿಸಿದರು. ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಶ್ರೀನಿವಾಸ ರಾವ್, ಉಪಾಧ್ಯಕ್ಷೆಯಾಗಿ ಚಾರುಲತಾ ಕೌಡಿ, ಕಾರ್ಯದರ್ಶಿ ಯಾಗಿ ವಜ್ರಾಂಗ (ಹರೀಶ), ಜೊತೆಕಾರ್ಯದರ್ಶಿಯಾಗಿ ಡಾ. ಪರಿಣಿತ ರವಿ, ಕೋಶಾಧಿಕಾರಿಯಾಗಿ ವಿಷ್ಣುಕುಮಾರ್ ತಂತ್ರಿ ಆಯ್ಕೆಯಾದರು.ವೇದಿನಿ ಪ್ರಾರ್ಥನೆ ಹಾಡಿದರು. ಡಾ. ಪರಿಣಿತ ರವಿ ಸ್ವಾಗತಿಸಿ, ವಂದಿಸಿದರು. ಶ್ರೀಕಾಂತ ಅನವಟ್ಟಿ ನಿರೂಪಿಸಿದರು
