ಕಾಸರಗೋಡು: ಓಣಂ ಹಬ್ಬದ ಉತ್ರಾಡಂ ದಿನದಂದು ನಡೆಸಿದ ಕಾರುಣ್ಯ ಪ್ಲಸ್ ಲಾಟರಿಯ ದ್ವಿತೀಯ ಬಹುಮಾನವಾದ 30 ಲಕ್ಷ ರೂ. ಕಾಸರಗೋಡು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಪರಿಸರದ ಮಧು ಲಾಟರೀಸ್ ಮೂಲಕ ಮಾರಾಟ ಮಾಡಿದ ಟಿಕೆಟ್‌ಗೆ ಲಭಿಸಿದೆ. ಪಿವೈ 264876 ಎಂಬ ನಂಬ್ರಕ್ಕೆ ಬಹುಮಾನ ಲಭಿಸಿದೆ. ಕಳೆದ ತಿಂಗಳ 16ರಂದು ನಡೆದ ಕಾರುಣ್ಯ ಲಾಟರಿಯ ಪ್ರಥಮವಾದ ಒಂದು ಕೋಟಿ ರೂ. ಮಧು ಲಾಟರಿ ಸ್ಟಾಲ್‌ನಿಂದ ಮಾರಾಟ ಮಾಡಿದ ಟಿಕೆಟ್‌ಗೆ ಲಭಿಸಿತ್ತು. ರಾಜ್ಯ ಲಾಟರಿಯ ಓಣಂ ಬಂಪರ್ ಬಹುಮಾನ 25 ಕೋಟಿ ರೂ.ಗಳ ಟಿಕೆಟ್ ಮಾರಾಟ ಆರಂಭಗೊಂಡಿದ್ದು, ಟಿಕೆಟ್‌ಗಳಿಗೆ ಮಧು ಲಾಟರೀಸ್, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಬ್ಯಾಂಕ್ ರಸ್ತೆ ಕಾಸರಗೋಡು ಇವರನ್ನು ಸಂಪರ್ಕಿಸಬಹುದು.
