ಕಾಸರಗೋಡು ಬ್ಲೋಕ್ ಕೇರಳೋತ್ಸವ 19ರಂದು ಸಮಾಪ್ತಿ

ಕುಂಬಳೆ: ಕಾಸರಗೋಡು ಬ್ಲೋಕ್ ಪಂ.ಕೇರಳೋತ್ಸವ ಆದಿತ್ಯವಾರ ಸಮಾಪ್ತಿಯಾಗಿದೆ. ಕಳೆದ ೪ರಿಂದ ಆರಂಭಗೊಂಡ ಸ್ಪರ್ಧೆಗಳು ಈಗಲೂ ಮುಂದುವರಿಯುತ್ತಿದೆ. 19ರಂದು  ಜಿಬಿಎಸ್‌ಬಿಎಸ್ ಶಾಲೆಯಲ್ಲಿ ನಡೆಯುವ ಕಲಾ ಸ್ಪರ್ಧೆಯನ್ನು ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸುವರು. ಬ್ಲೋಕ್ ಪಂ. ಅಧ್ಯಕ್ಷೆ ಸಿ.ಎ. ಶೈಮ ಅಧ್ಯಕ್ಷತೆ ವಹಿಸುವರು. ಸಿನಿಮಾ ನಟ,ಕಾಸರಗೋಡು ಡಿವೈಎಸ್ಪಿ ಸಿಬಿ ಥೋಮಸ್,  ಅಧ್ಯಕ್ಷೆ ತಾಹಿರ ಯೂಸುಫ್, ಕರ್ನಾಟಕ ಕಾರ್ಮಿಕ ಇಲಾಖೆ ಅಧ್ಯಕ್ಷ   ಟಿ.ಎಂ ಶಾಹಿದ್ ತೆಕ್ಕಿಲ್, ಕಲ್ಲಟ್ರ ಮಾಹಿನ್ ಹಾಜಿ, ಟಿ.ಪಿ. ರಂಜಿತ್,ಜಮೀಲ ಸಿದ್ದಿಕ್, ಜಾಸ್ಮಿನ್ ಕಬೀರ್ ಅತಿಥಿಗಳಾಗಿ ಭಾಗವಹಿಸುವರು. ಪಂ. ಉಪಾಧ್ಯಕ್ಷ ನಾಸರ್ ಮೊಗ್ರಾಲ್, ಪಿ.ಎ ಅಶ್ರಫ್ ಅಲಿ, ಶಮೀಮ ಅನ್ಸಾರಿ, ಅಶ್ರಫ್ ಕಾರ್ಲೆ, ಸಕೀನ ಅಬ್ದುಲ್ಲ ಹಾಜಿ, ಖದರುಲ್ ಮುನೀರ್, ಸಿ.ವಿ. ಜೇಮ್ಸ್, ಹನೀಫ ಪಾರ, ಸುಕುಮಾರ್ ಕುದ್ರೆಪ್ಪಾಡಿ, ಕಲಾಭವನ್ ರಾಜು, ಜಮೀಲ ಅಹಮ್ಮದ್, ಜಯಂತಿ, ಪ್ರೇಮ ಶೆಟ್ಟಿ, ಕೆ.ಎಂ.ಅಶ್ವಿನಿ, ಸೀನತ್ ನಸೀರ್, ಮುಜೀಬ್ ಕಂಬಾರ್, ಬಿ.ಎ.ರಹ್‌ಮಾನ ಆರಿಕ್ಕಾಡಿ, ನಿಸಾರ್ ಕುಳಂಗರ, ರಾಫಿ ಎರಿಯಾಲ್ ಭಾಗವಹಿಸುವರು. ಈ ಬಗ್ಗೆ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಅಶ್ರಫ್ ಕಾರ್ಲೆ, ಸಕೀನ ಅಬ್ದುಲ್ಲ ಹಾಜಿ, ತಾಹಿರ ಯೂಸುಫ್, ಸಿ.ವಿ. ಜೇಮ್ಸ್. ಹನೀಫ್ ಪಾರ ಭಾಗವಹಿಸಿದರು.

RELATED NEWS

You cannot copy contents of this page