ಕಾಸರಗೋಡು: ಪೇಟೆ ಶ್ರೀ ವೆಂಕಟ್ರಮಣ ದೇವಾಲಯದ ವ್ಯಾಸಮಂಟಪದಲ್ಲಿ ಇಂದು ಸಂಜೆ 6.30 ರಿಂದ ಕಾಸರಗೋಡು ದಸರಾ ಕಾರ್ಯಕ್ರಮ ನಡೆಯಲಿದೆ. ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿ, ಪೇಟೆ ಶ್ರೀ ವೆಂಕಟ್ರಮಣ ಸ್ವಾಮಿ ಕೃಪಾಶ್ರಿತ ಯಕ್ಷಗಾನ ಕಲಾಸಂಘದ ಆಶ್ರಯದಲ್ಲಿ ಕಾರ್ಯಕ್ರಮ ಜರಗಲಿದ್ದು, ಸಂಜೆ 6.30ಕ್ಕೆ ವೆಂಕಟ್ರಮಣ ಬಾಲಗೋಕುಲದ ಮಕ್ಕಳ ಪ್ರಾರ್ಥನೆಯೊಂದಿಗೆ ಆರಂಭಗೊಳ್ಳಲಿದೆ. ಕೆ.ಎನ್. ವೆಂಕಟ್ರಮಣ ಹೊಳ್ಳ ಅಧ್ಯಕ್ಷತೆ ವಹಿಸುವರು. ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ದೀಪ ಪ್ರಜ್ವಲನೆಗೈಯ್ಯುವರು. ಮಂಜುನಾಥ ಮಾನ್ಯ ಉಪಸ್ಥಿತರಿರುವರು. ಗುರುಪ್ರಸಾದ್ ಕೋಟೆಕಣಿ ಪ್ರಸ್ತಾಪಿಸುವರು. ಇದೇ ವೇಳೆ ಲೇಖಕ ವೈ ಸತ್ಯನಾರಾಯಣ, ಯಕ್ಷಗಾನ ನೇಪಥ್ಯ ಕಲಾವಿದ ಸುಧಾಕರರಿಗೆ ದಸರಾ ಗೌರವಾರ್ಪಣೆ, 7.30 ರಿಂದ ಸೌಮ್ಯಾ ಶ್ರೀಕಾಂತ್ ಮಧೂರು ಇವರ ಶಿಷ್ಯೆಯಂದಿರಿಂದ ಹೆಜ್ಜೆ ಗೆಜ್ಜೆ ಕಾರ್ಯಕ್ರಮ ನಡೆಯಲಿದೆ.
