ತಿರುವನಂತಪುರ: ಕಾಸರಗೋಡು ಮತ್ತು ವಯನಾಡು ಜಿಲ್ಲೆಯ ವೈದ್ಯಕೀಯ ಕಾಲೇಜುಗಳಿಗೆ ಪ್ರಥಮ ವರ್ಷ ಎಂ.ಬಿ.ಬಿ.ಎಸ್ ಕೋರ್ಸ್‌ಗಿರುವ ಪ್ರವೇಶವನ್ನು ಈ ವರ್ಷವೇ ಆರಂಭಿಸಲಾ ಗುವುದು. ಇದಕ್ಕಿರುವ ಅಗತ್ಯದ ಕ್ರಮಗಳಿಗೆ ಈಗಾಗಲೇ ಚಾಲನೆ ನೀಡಲಾಗಿದೆ.
ಇದಕ್ಕೆ ಅಗತ್ಯದ ಪೂರ್ವಭಾವಿ ಕ್ರಮಗಳು ಸೆಪ್ಟಂಬರ್ 22ರೊಳಗಾಗಿ ಪೂರ್ತೀಕರಿಸಿದರೆ ಮಾತ್ರವೇ ಈ ಎರಡು ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್ ಕೋರ್ಸ್‌ಗಿರುವ ಅಲೋಟ್‌ಮೆಂಟ್ ಕ್ರಮ ಆರಂಭಿಸಲು ಸಾಧ್ಯವಾಗಲಿದೆ. ಇದಕ್ಕಿರುವ ಕ್ರಮಗಳನ್ನು ತ್ವರಿತ ರೀತಿಯಲ್ಲಿ ಈಗಾಗಲೇ ಆರಂಭಿಸಲಾಗಿದೆ. ಈ ನಿಟ್ಟಿನಲ್ಲಿ ಈ ಎರಡು ವೈದ್ಯಕೀಯ ಕಾಲೇಜುಗಳನ್ನು ನೇರವಾಗಿ ಸಂದರ್ಶಿಸಿ ಅಗತ್ಯದ ಕ್ರಮೀಕರಣ ನಡೆಸುವ ಹೊಣೆಗಾರಿಕೆ ಯನ್ನು ಡಿಎಂಒ ಡಾ| ವಿಶ್ವನಾಥನ್ ರಿಗೆ ವಹಿಸಿಕೊಡಲಾಗಿದೆ ಯೆಂದು ಆರೋಗ್ಯ ಖಾತೆ ಸಚಿವೆ ವೀಣಾ ಜೋರ್ಜ್ ತಿಳಿಸಿದ್ದಾರೆ. ಇದರಂತೆ ಕಾಸರಗೋಡು ಮತ್ತು ವಯನಾಡು ವೈದ್ಯಕೀಯ ಕಾಲೇಜುಗಳಲ್ಲಿ ತಲಾ 50ರಂತೆ ಎಂಬಿಬಿಎಸ್ ಸೀಟುಗಳನ್ನು ಮಂಜೂರು ಮಾಡಲಾಗಿದೆ. ಇದರಲ್ಲಿ ತಲಾ 7 ಸೀಟುಗಳನ್ನು ಆಲ್ ಇಂಡಿಯಾ ಕ್ವಾಟಾಕ್ಕೆ ಬಿಟ್ಟುಕೊಡಲಾಗುವುದು.